ಬೆಂಗಳೂರ : ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರಡಿಯಲ್ಲಿ ಬಿ.ಆರ್.ಮೂವ್ಹೀಸ್ ಅವರ ಪಂಚಭಾಷಾ ನಟ ಸುಮನ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಹಾರರ್ ಜೊತೆಗೆ ಭಕ್ತಿಪ್ರಧಾನ ಕಥಾಹಂದರ ಹೊಂದಿರುವ ಕನ್ನಡ ಮತ್ತು ತೆಲಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ‘ತ್ರಿಷ’ ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯಗೊಂಡಿತು.
ಬಹುಭಾಷಾ ಚಲನಚಿತ್ರ ನಿರ್ದೇಶಕ ಆರ್. ಕೆ. ಗಾಂಧಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಎರಡನೇ ಹಂತದ ಚಿತ್ರೀಕರಣ ಹೊಸಕೋಟೆ ಸಮೀಪದ ಭಕ್ತರಹಳ್ಳಿಯಲ್ಲಿ ಸತತ ಚಿತ್ರೀಕರಣ ನಡೆಸಲಾಗಿದ್ದು ಊರ ಜನರಿಗೆ ವಿರೂಪಾಕ್ಷ ಶಾಪ ಕೊಡುವ ದೃಶ್ಯ, ಶಾಪದಿಂದ ‘ತ್ರಿಷ’ ಎಂಬ ಮಗುವಿನ ಆತ್ಮ ಊರ ಜನರನ್ನು ಕೊಲ್ಲುವ ದೃಶ್ಯ, ಗುರೂಜಿಯೊಬ್ಬರು ಚಿತ್ರದ ನಾಯಕ, ನಾಯಕಿ ಹಾಗೂ ಅವರ ಗೆಳೆಯರಿಗೆ ಹಿಂದಿನ ಜನ್ಮದ ರಹಸ್ಯ ತಿಳಿಸುವ ಸನ್ನಿವೇಶಗಳನ್ನು ಇಲ್ಲಿ ಚಿತ್ರೀಕರಿಸಲಾಯಿತು. ಇದರೊಂದಿಗೆ ಚಿತ್ರದ ಶೇ.೬೦ ಭಾಗದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಮೂರನೇ ಹಂತದ ಚಿತ್ರೀಕರಣಕ್ಕೆ ಹೊಸಕೋಟೆ ಸಮೀಪದ ಕಂಬ್ಲೀಪುರದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ನಿರ್ದೇಶಕ ಆರ್.ಕೆ.ಗಾಂಧಿ ತಿಳಿಸಿದರು.
ತಾರಾಗಣದಲ್ಲಿ ಸುಮನ್, ಕಾಲಿಕೇಯ ಪ್ರಭಾಕರ್,ಖುಷಿಗೌಡ, ಸುರೇಶ್ ಸೂರ್ಯ, ಸಿದ್ದುಕೃಷ್ಣ ಢೇಕಣಿ, ಡಾ.ಈಶ್ವರ್ ನಾಗನಾಥ್, ಮಹಾಂತೇಶ ವಿರೂಪಾಕ್ಷಿ ಸಮಯ್, ದುರ್ಗಾಭವಾನಿ, ಭಕ್ತರಹಳ್ಳಿ ರವಿ, ಆಟೋ ಮೂರ್ತಿ, ಕ್ಯಾಬ್ ನಾಗೇಂದ್ರ, ಲಿಂಗರಾಜು, ಶರತ್, ಮಲ್ಲೇಶ್ವರಿ, ಸುಪ್ರಿತಾರಾಜ್, ಗಣೇಶ್‌ರಾವ್ ಕೇಸರಕರ್, ಸುನಂದಾ ಕಲಬುರ್ಗಿ, ಯುವೀನ ಮುಂತಾದವರು ನಟಿಸುತ್ತಿರುವ ‘ತ್ರಿಷ’ ಚಿತ್ರಕ್ಕೆ ಪ್ರಮೋದ್ ಭಾರತೀಯ ಛಾಯಾಗ್ರಹಣ, ಎಂ.ಎಲ್. ರಾಜ ಸಾಹಿತ್ಯ ಸಂಗೀತ, ಪ್ರಸಾದ ಕಲೆ, ನಾರ್ಸಿಂಗ್ ರಾಥೋಡ್ ಸಂಕಲನ, ಸೂರ್ಯಕಿರಣ್ ನೃತ್ಯ , ಪಿ.ಆರ್.ಓ ಧೀರಜ್ ಅಪ್ಪಾಜಿ , ಡಾ.ಪ್ರಭು ಗಂಜಿಹಾಳ ,ಡಾ. ವೀರೇಶ ಹಂಡಿಗಿ ಪ್ರಚಾರಕಲೆ ಇದ್ದು ಡಾ.ಈಶ್ವರ್ ನಾಗನಾಥ್, ಹನುಮಂತರಾಯಪ್ಪ ಎಂ.ಎಸ್.ದಂಡಿನ್ ನಿರ್ಮಾಪಕರಾಗಿದ್ದಾರೆ.
**
ವರದಿ-ಡಾ.ಪ್ರಭು ಗಂಜಿಹಾಳ.
ಮೋ-9448775346