ಕಾಣದ ಕಡಲಿಗೆ’ ಕಿರುಚಿತ್ರದ ಚಿತ್ರೀಕರಣ ಮುಕ್ತಾಯ

Share the Post Now

ವರದಿ:ಡಾ.ಪ್ರಭು.ಗಂಜಿಹಾಳ

ಹುಬ್ಬಳ್ಳಿ : ನವ ಋತು ಕ್ರಿಯೇಶನ್ಸ್ ಅರ್ಪಿಸುವ ‘ಕಾಣದ ಕಡಲಿಗೆ’ ಕಿರುಚಿತ್ರದ
ಚಿತ್ರೀಕರಣ ಹುಬ್ಬಳ್ಳಿ ಹಾಗೂ
ನುಗ್ಗಿಕೇರಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ವಾರಗಳ ಕಾಲ ನಡೆದು
ಮುಕ್ತಾಯಗೊಂಡು ಇದೀಗ ಸಂಕಲನ ಕಾರ್ಯ ಆರಂಭಗೊಂಡಿದೆ.


ಈ ಹಿಂದೆ ಊ.., ಮೈ ಸ್ಕೂಲ್ ಸೇರಿದಂತೆ ಸಾಕಷ್ಟು ಕಿರುಚಿತ್ರಗಳನ್ನು ನೀಡಿರುವ
ನವೀನ ಶೆಟ್ಟರ ಅವರು ಕವಿ, ಸಂಘಟಕ ,ಚೇತನಾ ಪೌಂಡೇಶನ್ ಸಂಸ್ಥಾಪಕ
ಚಂದ್ರಶೇಖರ ಮಾಡಲಗೇರಿ ಅವರ ಕವಿತೆಗಳ ಪ್ರೇಮದ ಎಳೆಯನ್ನಿಟ್ಟುಕೊಂಡು
ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ.

ಪ್ರೀತಿಸುವ ಪ್ರತಿಯೊಬ್ಬ ಹುಡುಗ-
ಹುಡುಗಿಯರು ನೋಡಲೇಬೇಕಾದ ಈ ಚಿತ್ರದಲ್ಲಿ ನಾಯಕನಾಗಿ ಸೂರಜ್ ,
ನಾಯಕಿಯಾಗಿ ಗಾಯಿತ್ರಿ ಅಭಿನಯಿಸಿದ್ದಾರೆ.
ತಾಂತ್ರಿಕ ವರ್ಗದಲ್ಲಿ ವರುಣ ಸಿಗ್ಗಿ ಅತ್ಯುತ್ತಮ ಛಾಯಾಗ್ರಹಣ ಮಾಡಿದ್ದಾರೆ.


ಸಂಕಲನ ಜೋಹೆಬ್ ಅಹ್ಮದ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ
ಹಂಡಗಿ ಅವರದಿದೆ. ವರುಣ್ ಸಿಗ್ಲಿ ಕಥೆ ಹೆಣೆದಿದ್ದು , ಚಿತ್ರಕಥೆ ಜೊತೆಗೆ
ನಿರ್ದೇಶನವನ್ನು ನವೀನ ಶೆಟ್ಟರ ಮಾಡಿದ್ದಾರೆ. ಚೇತನ ಫೌಂಡೇಷನ್ ಸರ್ವ
ಸಂಚಾಲಕರು ಹಾಗೂ ಅಭಿಮಾನಿಗಳು ಶುಭಕೋರಿದ್ದು ಈ ಕಿರುಚಿತ್ರ ಏಪ್ರೀಲ್
ತಿಂಗಳಲ್ಲಿ ಬಿಡುಗಡೆ ಮಾಡುವದಾಗಿ ಚಂದ್ರಶೇಖರ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!