ಬೆಳಗಾವಿ
ವರದಿ -ರವಿ ಬಿ ಕಾಂಬಳೆ
ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಪದಾಧಿಕಾರಿಗಳು ಹಾಗೂ ಪದಗ್ರಹಣ ಸಮಾರಂಭ ಕಾರ್ಯಕ್ರಮ ಹುಕ್ಕೇರಿ ಕೋರ್ಟ್ ಸರ್ಕಲ್ ಹಳೆ ತಶೀಲ್ದಾರ್ ಕಚೇರಿ ಆವರಣದಲ್ಲಿ ಕಾರ್ಯಕ್ರಮ ಜರುಗಿತು
ಇಂದು ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಂಗಲೆ ಅವರ ನೇತೃತ್ವದಲ್ಲಿ ಅತಿ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ನಡೆಸಲಾಯಿತು
ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭವನ್ನು ನಡೆಸಲಾಯಿತು ಈ ಕಾರ್ಯಕ್ರಮದ ಶ್ರೀ ಅಭಿನವ ಮಂಜುನಾಥ್ ಸ್ವಾಮಿಗಳು ಪತ್ರಕರ್ತರ ಬಗ್ಗೆ ಅನೇಕ ವಿಷಯಗಳನ್ನು ತಿಳಿ ಹೇಳಲಾಯಿತು ಪತ್ರಕರ್ತರು ಯಾವಾಗಲು ನಿಷ್ಠೆಯಿಂದ, ಧೈರ್ಯಯಿಂದ, ಸ್ವಾಭಿಮಾನದಿಂದ ನಡೆದು ತಮ್ಮ ಮಾರ್ಗವನ್ನು ಜನರಿಗೆ ಸಹಾಯಕವಾಗಿರಬೇಕು ಮತ್ತು ಪತ್ರಿಕರ್ತರ ಸಂಘಟನೆಯಲ್ಲಿ ಮತ್ತು ತಮ್ಮ ಸಂಘಟನೆಯಲ್ಲಿ ಎಷ್ಟು ಒಗ್ಗಟ್ಟನಲ್ಲಿ ಇರುತಿರೋ ಅಷ್ಟು ಬಲವಿರುತ್ತೆದೆ ಬರುವ ದಿನಗಳಲ್ಲಿ ತಮ್ಮ ಸಂಘಟನೆ ಅತಿ ಬಲಿಷ್ಠವಾಗಲಿ ಎಂದು ಹಾರೈಸಿ ಆಶೀರ್ವಾದಿಸಿದರು ಹಾಗೂ ಈ ಸಂದರ್ಭದಲ್ಲಿ ಬಸವ ಭುವನ ಹೆಬ್ಬಾಳ ಇವರ ವತಿಯಿಂದ ವಚನಗಳ ಸಿಹಿ ನುಡಿ ಮುಖಾಂತರ ತಿಳಿ ಹೇಳಲಾಯಿತು ಮತ್ತು ಸ್ವರ ಸಂಚನಾ ಮೆಲೋಡಿ ಇವರ ವತಿಯಿಂದ ಹಾಡು ಮತ್ತು ನೃತ್ಯ ಮುಖಾಂತರ ಕಾರ್ಯಕ್ರಮವನ್ನು ಅತಿ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ
ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ ಕಾಮಣ್ಣವರ, ಹುಕ್ಕೇರಿ ತಾಲೂಕ ಅಧ್ಯಕ್ಷರಾದ ರವಿ. ಬಿ. ಕಾಂಬಳೆ, ಹುಕ್ಕೇರಿ ತಾಲೂಕ ಉಪಾಧ್ಯಕ್ಷರಾದ ಶಿವಾಜಿ .ಎನ್. ಬಾಲೇಶಗೋಳ, ಸುನೀಲ್ ಲಾಳಗೆ, ಆಧೀನಾತ್ ರೋಕಡೆ, ಗುರುಸಿದ್ದ ಮಡಿವಾಳ, ಹಾಗೂ ಮುಖ್ಯ ಅತಿಥಿಗಳಾದ ಮಾರುತಿ ಅಷ್ಟಗೆ, ಎಸ್. ಸಿ. ಎಸ್. ಟಿ. ದೌರ್ಜನ್ಯ ತಡೆ ಸಮಿತಿ ಸದಸ್ಯರಾದ ಸುರೇಶ ತಳವಾರ, ರಮೇಶ್ ಹುಂಜಿ, ಪುರಸಭೆ ಅಧ್ಯಕ್ಷರಾದ ಅನ್ನಪ್ಪಾ ಪಾಟೀಲ್, ಆನಂದ್ ಗಂಧ, ಭೀಮಸೇನ್ ಬಾಗಿ, ಬಸವರಾಜ್ ಕಲ್ಲಟ್ಟಿ, ಅಪ್ಪಣ್ಣಾ ಖಾತೆದಾರ್, ಅನೇಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.