ಹಳ್ಳೂರ . ಮಳೆ ಬೆಳೆ ಚೆನ್ನಾಗಿ ಆಗಿ ಸುಖ ಶಾಂತಿ ನೆಮ್ಮದಿ ನೀಡಿ ಮಾನವ ಹಾಗೂ ದನಕರುಗಳು ಸುಖವಾಗಿರಲೆಂದು ಎಂದು ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಹಳ್ಳೂರು ಗ್ರಾಮದಲ್ಲಿರುವ ದ್ಯಾಮವ್ವ ದೇವಿ ಹಾಗೂ ಮಹಾಲಕ್ಷ್ಮಿ ದೇವಿಯ ವಾರದ ಕಾರ್ಯಕ್ರಮವನ್ನು ಶುಕ್ರವಾರ ದಂದು ಎರಡನೇ ವಾರದ ಕಾರ್ಯಕ್ರಮವನ್ನು ಅತಿ ವಿಜೃಂಭಣೆಯಿಂದ ಹಳ್ಳೂರ, ಶಿವಾಪುರ, ಕಪ್ಪಲಗುದ್ದಿ ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ ನೆರವೇರಿತು ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಭಜನಾ ಪದ, ಭಕ್ತಿಗೀತೆಗಳು, ಡೊಳ್ಳಿನ ಪದಗಳು ಮುಂಜಾನೆಯಿಂದ ಸಾಯಂಕಾಲದವರಿಗೆ ಜರುಗಿದವು. ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಪಡೆದುಕೊಂಡರು ದೇವಸ್ಥಾನದಲ್ಲಿ ಅನ್ನಪ್ರಸಾದ ವ್ಯವಸ್ಥೆ ನಡೆಯಿತು. ಗ್ರಾಮದ ಎಲ್ಲ ದೇವರಿಗೆ ಮಹಿಳೆಯರು ನೈವೇದ್ಯ ಅರ್ಪಿಸಿದರು ಗ್ರಾಮದಲ್ಲಿರುವ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದು ಮಾಡಿ ವಾರದ ಕಾರ್ಯಕ್ರಮವನ್ನು ಆಚರಣೆ ಮಾಡಿದರು. ಈ ಸಮಯದಲ್ಲಿ ಹಳ್ಳೂರ, ಶಿವಾಪೂರ, ಕಪ್ಪಲಗುದ್ದಿ ಗ್ರಾಮಸ್ಥರಿದ್ದರು.





