mysur\dasara

ವಿಶ್ವವಿಖ್ಯಾತ ಮೈಸೂರು ದಸರಾ ಗಜಪಡೆಗೆ ನಾಳೆ ಅದ್ಧೂರಿ ಸ್ವಾಗತ..!

Share the Post Now

ಮೈಸೂರು:  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023  ಅರಮನೆ ನಗರಿ ಸಜ್ಜಾಗುತ್ತಿದೆ. ಅಂಬಾರಿಯನ್ನು ಹೊತ್ತು ಸಾಗುವ ಅಭಿಮನ್ಯು ಸೇರಿದಂತೆ ಪ್ರತಿ ಬಾರಿಯಂತೆ ಈ ಬಾರಿಯೂ 14 ಆನೆಗಳು ಜಂಬೂ ಸವಾರಿಯಲ್ಲಿ ಭಾಗಿಯಾಗಲಿವೆ. ಈ ಆನೆಗಳ ಸ್ವಾಗತ ಕಾರ್ಯಕ್ರಮ ಕಾರಣಾಂತರಗಳಿಂದ ನಾಳೆ (ಸೆ.05)ಕ್ಕೆ ಮುಂದೂಡಲಾಗಿದೆ.

ಮಂಗಳವಾರ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಮಧ್ಯಾಹ್ನ 12.01ರಿಂದ 12.51ರ ಅಭಿಜಿನ್ ಲಗ್ನದಲ್ಲಿ ಆನೆಗಳಿಗೆ ಪೂಜೆ ಮಾಡುವ ಮೂಲಕ ಗಜಪಡೆಯನ್ನು ಸ್ವಾಗತ ಮಾಡಿಕೊಳ್ಳಲಾಗುತ್ತದೆ. ಜಿಲ್ಲಾ ಉಸ್ತವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಅವರು ಗಜಪಡೆಯನ್ನು ಬರಮಾಡಿಕೊಳ್ಳುತ್ತಾರೆ. ಗಜಪಡೆ ನಾಳೆಯಿಂದ ಅರಮನೆಯಲ್ಲಿ ಬೀಡು ಬಿಡಲಿವೆ 

Leave a Comment

Your email address will not be published. Required fields are marked *

error: Content is protected !!