ಹೈದರಾಬಾದ್: ಬಾಯ್ ಫ್ರೆಂಡ್ ಜೊತೆ ತಂಗಿ ಪರಾರಿಯಾದ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಕ್ಕನ ಸಾವಿಗೆ ತಂಗಿ ಮತ್ತು ಆಕೆಯ ಬಾಯ್ ಫ್ರೆಂಡ್ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದ್ದು ಸ್ವತಃ ಇಬ್ಬರು ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ಈ ಘಟನೆಯು ಆಗಸ್ಟ್ 28 ರಂದು ರಾತ್ರಿ ಆಂಧ್ರಪ್ರದೇಶದ ಕೋರುಟ್ಲದಲ್ಲಿ ನಡೆದಿದೆ.
ಟೆಕ್ಕಿಯಾಗಿದ್ದ ಅಕ್ಕ ಬಂಕ ದೀಪ್ತಿ (22) ಕೊಲೆಯಾದ ದುರ್ದೈವಿ. ಈಕೆಯ ತಂಗಿ ಬಂಕ ಚಂದನಾ ಹಾಗೂ ಚಂದನಾಳ ಬಾಯ್ಫ್ರೆಂಡ್ ಉಮರ್ ಶೇಖ್ ಸುಲ್ತಾನ್ ಕೊಲೆ ಮಾಡಿದ ಆರೋಪಿಗಳು. ಘಟನೆ ಸಂಬಂಧ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇನ್ನು ಓಡಿ ಹೋಗಬೇಕಾದರೆ ಚಂದನಾ ತಮ್ಮ ಮನೆಯಲ್ಲೇ ಕದ್ದಂತಹ ಭಾರೀ ಮೊತ್ತದ ಚಿನ್ನಾಭರಣ ಹಾಗೂ 1,25,000 ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಒಟ್ಟು ಐವರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಿಂದ 2 ಬಂಗಾರದ ಡಾಬು, ಒಂದು ಹಾರ, 3 ಜೊತೆ ಕೈ ಬಳೆ, ಒಂದು ತಾಳಿ, ಒಂದು ಚಿನ್ನದ ಹಾರ, 1 ಲಕ್ಷ ನಗದು, ಆರೋಪಿಗಳ ಫೋನ್ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ