ಬೆಳಗಾವಿ
ವರದಿ: ಪ್ರಕಾಶ ಚ ಕಂಬಾರ
ಪಾಲಬಾವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಲಬಾವಿ ಕ್ಲಸ್ಟರ್ ಮಟ್ಟದ “ಕಲಿಕಾ ಹಬ್ಬ” ಕಾರ್ಯಕ್ರಮ ಸಂಪನ್ನ;
ಶಿಕ್ಷಣ ಸಂಯೋಜಕ ಶ್ರೀಕಾಂತ ಕಂಬಾರ, ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ಎಂ.ತೇಲಿ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮುಗಳಖೋಡ : ಅನುಭವಿದಲ್ಲಿ ಅಮೃತವಿದೆ ಹಳೆ ಬೇರು ಹೊಸ ಚಿಗುರು ಕೂಡಿರಲು, ಮರ ಸೊಬಗು ಎಂಬ ಹಿರಿಯರ ವಾಣಿಯಂತೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕೌಶಲ್ಯಗಳನ್ನು ಬೆಳೆಸಬೇಕು ಮಕ್ಕಳಲ್ಲಿಯ ಪ್ರತಿಭೆಗಳನ್ನು ಕೊರತೆಗೆಯುವ ವಿನೂತನ ಕಾರ್ಯಕ್ರಮವೇ ಕಲಿಕಾ ಹಬ್ಬ. ಶಾಲಾ ಮಕ್ಕಳಿಗೆ ಕಲಿಕಾ ಚೇತರಿಕೆಯ ಮೂಲಕ ಕಲಿಕಾ ಹಬ್ಬ ಕಾರ್ಯಕ್ರಮ ಒಂದು ಭಾಗವಾಗಿದ್ದು ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸುವ ಪ್ರಯತ್ನ ಶಿಕ್ಷಕರು ಮಾಡಬೇಕು. ಇಂದು ನಮ್ಮ ಸರಕಾರಿ ಶಾಲೆಯಲ್ಲಿಯ ಮಕ್ಕಳನ್ನ ಜಾಗತಿಕ ಮಟ್ಟಕ್ಕೆ ಕರೆದೊಯ್ಯುವ ಪ್ರಯತ್ನ ನಾವೆಲ್ಲರೂ ಮಾಡಬೇಕಾಗಿದೆ. ಇಲಾಖೆಯು ಸರ್ಕಾರಿ ಶಾಲೆಗಳಲ್ಲಿ ವಿನೂತನವಾದ ಕಾರ್ಯಕ್ರಮವನ್ನು ಮಾಡುತ್ತಿರುವುದು ಶ್ಲಾಘನೀಯ, ಎಸ್‌ಡಿಎಂಸಿ ಪದಾಧಿಕಾರಿಗಳ ಹಾಗೂ ಹಿರಿಯರ ಸಂಪೂರ್ಣ ಸಹಕಾರದಿಂದ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಭಾವತಿ ಪಾಟೀಲ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು.
ಗ್ರಾಮದ ದಿವಂಗತ ಮಲಗೌಡ ನೇಮಗೌಡ (ನಾಯಿಕ) ಪಾಟೀಲ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಮುಂಜಾನೆ ಸನ್.೨೦೨೨ -೨೩ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕ ಬಿಇಓ ಕಾರ್ಯಾಲಯ ರಾಯಬಾಗ ಸಮೂಹ ಸಂಪನ್ಮೂಲ ಕಾರ್ಯಾಲಯ ರಾಯಬಾಗ ಇವರ ಆಶ್ರಯದಲ್ಲಿ ಪಾಲಬಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಲಬಾವಿ ಕ್ಲಸ್ಟರ್ ಮಟ್ಟದ “ಕಲಿಕಾ ಹಬ್ಬ” ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವಹಿಸಿ ಮಾತನಾಡಿದರು.
ಬಾಲಕಿರ ಖೋ ಖೋ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಮೂವರು ವಿದ್ಯಾರ್ಥಿನಿಯರನ್ನು ಬಿಇಓ ಪ್ರಭಾವತಿ ಪಾಟೀಲರವರು ಶಾಲು ಹೊದಿಸಿ, ಹೂವಿನ ಹಾರ ಹಾಕಿ ಗೌರವಿಸಿ ಸನ್ಮಾನಿಸಿದರು.
ಭೂದಾನಿಗಳಾದ ಅಣ್ಣಾಸಾಬಗೌಡ ಪಾಟೀಲ ಸಭೆಯ ಅಧ್ಯಕ್ಷತೆವಹಿಸಿದ್ದರು. ಸಿ.ಆರ್.ಪಿ ಆರ್.ಎಂ.ತೇಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ರಾಂತ ಮುಖ್ಯಗುರು ಚಂದ್ರಯ್ಯ ಹಿರೇಮಠ, ವೀರಯ್ಯ ಮಠಪತಿ, ಗಿರೆಪ್ಪ ತೇಗೂರ, ನಿವೃತ್ತ ಹಿರಿಯ ಶಿಕ್ಷಕ ಆರ್.ಡಿ.ಪಾಟೀಲ, ಎಸ್.ಎಂ.ಪಾಟೀಲ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಸಂಯೋಜಕರಾದ ಶ್ರೀಕಾಂತ ಕಂಬಾರ, ಹನುಮಂತ ಬೆನಾಡಿ, ತಾತಾಸಾಬಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಸಿ.ಆರ್.ಪಿ ಆರ್.ಎಂ.ತೇಲಿ, ರಾಣಿ ಚೆನ್ನಮ್ಮ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಕೆ.ಬಿ.ಸಾಯಣ್ಣವರ, ಗ್ರಾಮ ಪಂ ಸದಸ್ಯ ಪರಪ್ಪ ಗೋಡಿ, ಬಸಪ್ಪ ತೇಗೂರ, ಮಹಾಲಿಂಗ ಬಳಿಗಾರ, ಇಲಾಯಿ ಕಾಗವಾಡ, ಸಾಗರ ಕುರಬೆಟ್ಟಿ, ಸುಭಾಷ ಹಿರೇಮಠ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಚಿದಾನಂದ ಬೋಜನ್ನವರ, ಪ್ರಧಾನ ಗುರುಮಾತೆ ಎಸ್.ಎಸ್.ಬಸನಗೌಡರ, ಪ್ರಧಾನಗುರು ಎಸ್.ಕೆ.ಬಡಿಗೇರ, ಜಗದೀಶ ಮುಗಳಖೋಡ, ಪಿ.ವಾಯ್.ಮಾದರ, ಗುರುಮಾತೆ ರಾಜಶ್ರೀ ಪತ್ತಾರ, ಕೆ.ಕೆ.ಕೋಳಿಗುಡ್ಡ, ಬಸವರಾಜ ಮಾಳಿ, ಹಿರಿಯ ಶಿಕ್ಷಕ ಎಂ.ಬಿ.ಬಡಿಗೇರ, ಮಂಜುನಾಥ ದಡೂತಿ, ನಾಗರಾಜ ಕ್ಷತ್ರಿಯ, ಸಿರಾಜ್ ಬಿರಾದರ ಇತರರು ಉಪಸ್ಥಿತರಿದ್ದರು
ಮುಖ್ಯೋಪಾಧ್ಯಾಯ ಎ.ಜಿ.ಬಾದಾಮಿ ಸ್ವಾಗತಿಸಿದರು, ಶಿಕ್ಷಕ ಲಕ್ಕಪ್ಪ ಬಿದರಿ ನಿರೂಪಿಸಿದರು, ಶಿಕ್ಷಕ ಪ್ರಕಾಶ ಕೂಡಲಗಿ ವಂದಿಸಿದರು.
ಬೆಳಗ್ಗೆ ೯ಗಂಟೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ತಳಿರು ತೋರಣಗಳಿಂದ ಸಿಂಗಾರಗೊಂಡ ಎತ್ತಿನ ಬಂಡಿಯಲ್ಲಿ ಸರಸ್ವತಿಯ ಭಾವಚಿತ್ರದ ಭವ್ಯ ಮೆರವಣಿಗೆಯು, ಡೋಳಿ ಕುಣಿತ, ಲೇಜಿಮ್ ಕುಣಿತ, ಬೇಂಡ್ ಬಾಜಾದೊಂದಿಗೆ ಹಾಗೂ ಬಾಲಕಿಯರ ಪೂರ್ಣಕುಂಭ ಮೇಳದೊಂದಿಗೆ ಭವ್ಯ ಮೆರವಣಿಗೆ ಜರುಗಿತು. ಮಧ್ಯಾಹ್ನ ೨ ಗಂಟೆಗೆ ಶಾಲೆಯ ಆವರಣದಲ್ಲಿ ಸಿಹಿಯಾದ ಭೋಜನ ನೆರವೇರಿತು.