ಹನಿ ಟ್ರ್ಯಾಪ್ ಬೆಡಗಿ ಈ ಕಾಂಗ್ರೆಸ್ ಯುವ ನಾಯಕಿ : ಬೆಳಗಾವಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಏಕೆ..?

Share the Post Now

ಬೆಳಗಾವಿ : ಕಾಂಗ್ರೆಸ್ ಯುವ ನಾಯಕಿ, ಸಮಾಜಸೇವಕಿ, ಬಡವರ ಬಂಧು ಎಂಬ ಮುಂತಾದ ಹೆಸರಿನಿಂದ ಕರೆದುಕೊಳ್ಣುವ ಈ ಯುವತಿಯ ಅಶ್ಲೀಲ ಭಂಗಿಯ ವಿಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಕುರಿತಾಗಿ ಯುವತಿ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.

ಆದರೆ ಈ ಪ್ರಕರಣ ಇಷ್ಟಕ್ಕೆ ಮುಗಿದಿಲ್ಲ. ಕಳೆದ ಮೂರು ತಿಂಗಳ ಹಿಂದೆ ಹನಿಟ್ರ್ಯಾಪ್ ಆರೋಪದಡಿ ಈ ಯುವತಿ ಬೆಳಗಾವಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಆ ವ್ಯಕ್ತಿ ಬೆಳಗಾವಿ ಮೂಲದ ಸರ್ಕಾರಿ ನೌಕರ. ವ್ಯಕ್ತಿಯ ಜೊತೆಗಿನ ಅಶ್ಲೀಲ ವೀಡಿಯೋ ಇಟ್ಟುಕೊಂಡು ಯುವತಿ ಹೆದರಿಸಿದ್ದಾಳೆ ಎಂಬ ಮಾತು ಕೇಳಿಬಂದಿದ್ದರು, ಈ ಪ್ರಕರಣ ಯಾವ ಕಾರಣಕ್ಕೆ ಮುಚ್ಚಿ ಹೋಗಿದೆ ಎಂಬುದಂತು ಇನ್ನೂ ಅಸ್ಪಷ್ಟ.

ಅಷ್ಟೇ ಅಲ್ಲ ಯುವತಿ ಬೆಳಗಾವಿ ಪೊಲೀಸ್ ಠಾಣೆಗೆ ನ್ಯಾಯಕ್ಕಾಗಿ ಬೇಡಿಕೆ ಇಟ್ಟಿದ್ದರು ಯಾವುದೇ ಉಪಯೋಗವಾಗಿಲ್ಲ. ಮಹಿಳೆ ಆರೋಪಿಸಿರುವ ವ್ಯಕ್ತಿ ಮಾಜಿ ಸಚಿವರೊಬ್ಬರ ಆಪ್ತ ಸಹಾಯಕ ಎಂಬುದು ಸಧ್ಯ ಬೆಳಕಿಗೆ ಬಂದಿದೆ. ಆದರೆ ಮಾತುಕತೆ ಮೂಲಕ ಆ ಸಂದರ್ಭದಲ್ಲಿ ಪ್ರಕರಣ ಸುಖಾಂತ್ಯ ಖಂಡಿತ್ತಾ ಅಥವಾ…? ಹಣದ ಆಮಿಷ ಇಡಲಾಗಿತ್ತಾ ಎಂಬುದು ಸಧ್ಯಕ್ಕೆ ಮರೆಮಾಚಲಾಗಿದೆ.

ಮುಖವಾಡ ಕಳಚಿದ್ದ ಬೆಳಗಾವಿ ವಾಯ್ಸ್ :

ಕಾಂಗ್ರೆಸ್ ಯುವ ನಾಯಕಿಯಾದ ಇವಳು ಮಾಡುವುದು ಮಾತ್ರ ಕೆಳಮಟ್ಟದ ಕೆಲಸ. ಈ ಯುವತಿ ಬೆಳಗಾವಿ ಮೂಲದ ಸರ್ಕಾರಿ ನೌಕರನನ್ನೂ ಹನಿಟ್ರ್ಯಾಪ್ ಬಲಿಗೆ ಬೀಳಿಸಿ ಹಣ ಹೊಡೆಹಲು ಯತ್ನಿಸಿದವಳ ಮುಖವಾಡ ಬಯಲಾಗಿದೆ.

ಹೌದು ಕಿಸಾನ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ  ಈ ಯುವತಿಯ ಅಶ್ಲೀಲ ವೀಡಿಯೋಗಳು ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈಕೆ ಸಮಾಜಸೇವೆ ಹೆಸರಿನಲ್ಲಿ ನಡೆಸುತ್ತಿದ್ದ ಅನೇಕ ಅನಾಚಾರಗಳು ಸಧ್ಯ ಹೊರಬಿದ್ದಿವೆ. ರಾಜಕೀಯ ನಾಯಕರನ್ನು ಹಾಗೂ ಅಧಿಕಾರಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದ ಈಕೆ ನಂತರ ಹಣ ವಸೂಲಿ ಮಾಡುವ ಕೆಲಸ ನಡೆಸುತ್ತಿದ್ದಳು. 

ಈ ಯುವತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿಯೂ ಗುರುತಿಸಿಕೊಂಡಿದ್ದಳು. ಜೊತೆಗೆ ತನ್ನದೇ ಹೆಸರಿನ ಸ್ವಯಂ ಸೇವಾ ಸಂಸ್ಥೆ ಪ್ರಾರಂಭಿಸಿ ಸಮಾಜಸೇವೆ ನಾಟಕ ಮಾಡುತ್ತಿದ್ದಳು. ಈ ಯುವತಿಯ ಅನಾಚಾರ ಕುರಿತು ಪತ್ರಿಕಾ ವರದಿ ಕೂಡಾ ಬಂದಿದೆ

Leave a Comment

Your email address will not be published. Required fields are marked *

error: Content is protected !!