ಬೆಳಗಾವಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ನ ಲಿಂ.ದುಂಡಪ್ಪ ಗುರಪ್ಪ ಸವದಿಯವರ ಹಾರೂಗೇರಿ ತೋಟದಲ್ಲಿ ಸ್ಮರಣೋತ್ಸವ ಕಾರ್ಯಕ್ರಮವು ಮುಂಜಾನೆ 10:30 ಷಟಸ್ಥಲ ಧ್ವಜಾರೋಹಣದೊಂದಿಗೆ ಜರುಗಿತು.ಸಾನಿಧ್ಯ :ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಹ0ದಿಗುಂದ ಆಡಿ ವಹಿಸಿ ಆಶೀರ್ವಚನ ನೀಡಿದರು.
ಸಮ್ಮುಖವನ್ನು ನದಿ ಇಂಗಳಗಾಂವದ ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಪೂಜ್ಯ ಶ್ರೀ ಐ ಆರ್ ಮಠಪತಿ ಅಧ್ಯಕ್ಷರು, ಶರಣ ವಿಚಾರವಾಹಿನಿ, ಹಾರೂಗೇರಿಯವ್ರು ವಹಿಸಿಕೊಂಡು ಮಾತನಾಡಿ, ಆಧ್ಯಾತ್ಮ, ಭಕ್ತಿ, ದಾನ ಧರ್ಮದಲ್ಲಿ ಎತ್ತಿದ ಕೈ ಅದು ಲಿಂ. ದುಂಡಪ್ಪ ಸವಧಿಯವರು, ಅವರಂಥ ಸರಳ ಸಜ್ಜನಿಕೆಯ ವ್ಯಕ್ತಿತ್ವ ಸಮಾಜದಲ್ಲಿ ವಿರಳ ಎಂದು ಹೇಳಿದರಲ್ಲದೆ ಅವರ ಆತ್ಮ ಬಯಲಿನಲ್ಲಿ ಬಯಲಾಗಿ ಬಯಲು ತಾನಾಗಿ ಬಯಲಲ್ಲೇ ಬಯಲು ಕಂಡಿತು ಎಂದರು.ಇದೇ ಸಂದರ್ಭದಲ್ಲಿ ದಯಾನಂದ ದೇವರು ತಂವಶಿ ವೇದಿಕೆಯನ್ನ ಹಂಚಿಕೊಂಡಿದ್ದರು.
ಅನುಭಾವ : ಪ್ರಕರಣ ಪ್ರವೀಣ, ಶ್ರೀ ಕೃಷ್ಣಗೌಡ ಪಾಟೀಲ್ ಶಂಭುಲಿಂಗ ಆಶ್ರಮ, ಕೋಳೂರು.
ಶ್ರೀ ಗಂಗಪ್ಪ ಜನವಾಡ ಶರಣರು ದರೂರ.
ಶ್ರೀ ಗಂಗಾಧರಯ್ಯ ಹಿರೇಮಠ ಹಾರೂಗೇರಿ ಇವರಿಂದ ಅನುಭಾವದ ಅಮೃತ ನುಡಿಗಳು ಜರುಗಿದವು.ಈ ಸಂದರ್ಭದಲ್ಲಿ
ಸವದಿ ಪರಿವಾರದವರು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಸುನೀಲ್ ಕಬ್ಬೂರ ಹಾರೂಗೇರಿ