ಮೂರು ಜನ ಅಂತರರಾಜ್ಯ ಕುಖ್ಯಾತ ಪಂಪ್ ಸೆಟ್ ಕಳ್ಳರ ಬಂಧನ

Share the Post Now

ಬೆಳಗಾವಿ

ವರದಿ ಸಚಿನ್ ಕಾಂಬ್ಳೆ


ಕಾಗವಾಡ: ಕಳೆದ ಒಂದು ವರ್ಷದಿಂದ ತಾಲೂಕಿನ ಕೃಷ್ಣಾ ನದಿಯ ದಡದಲ್ಲಿ ಹಾಗೂ ಬಾವಿಗಳಿಗೆ ಅಳವಡಿಸಿದ ನೀರಾವರಿ ಪಂಪ್ ಸೆಟ್ ಗಳನ್ನು ಕಳ್ಳತನ ಮಾಡುತ್ತಿದ್ದ ಮೂರು ಜನ ಅಂತರರಾಜ್ಯ ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಕಾಗವಾಡ ಪೋಲಿಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ|| ಸಂಜೀವ ಪಾಟೀಲ್,ನಮ್ಮ ಅಥಣಿ ಡಿವೈಎಸ್ಪಿ ಹಾಗೂ ಅಥಣಿ ಸಿಪಿಐ ಮತ್ತು ಕಾಗವಾಡ ಪಿಎಸ್ಐ ತನಿಖಾ ತಂಡ ಒಂದು ವರ್ಷಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಮೂಲದ ಮೂರು ಜನ ಅಂತರ ರಾಜ್ಯ ಕುಖ್ಯಾತ ಮೋಟಾರ್ ಪಂಪಸೆಟ್ ಕಳ್ಳರ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ,ಬಂಧಿತರಿಂದ ಸುಮಾರು 7 ಲಕ್ಷ ಮೌಲ್ಯದ 36 ಪಂಪಸೆಟ್ ಹಾಗೂ ಕೃತ್ಯಕ್ಕೆ ಬಳಸಿದ್ದ 1,97,000 ಮೌಲ್ಯದ ಗೂಡ್ಸ್ ವಾಹನ ಹಾಗೂ ದ್ವೀಚಕ್ರ ವಾಹನ ಹೀಗೆ 8,97,000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಕರಣವನ್ನು ಪತ್ತೆ ಮಾಡುವಲ್ಲಿ ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ,ಸಿಪಿಐ ರವೀಂದ್ರ ನಾಯ್ಕೋಡಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಕಾಗವಾಡ ಪಿಎಸ್ಐ ಎಚ್ ಕೆ ನರಳೆ, ಹಾಗೂ ಎಸ್ ಅರ್ ನಾಯ್ಕೋಡಿ,ಸಿಬ್ಬಂದಿಗಳಾದ ಬಿ.ಎಂ.ರಜಾಕನವರ,ಜೆ.ಎ.ಸೋನಾವನೆ,ಹವಾಲ್ದಾರ್ ಆರ್ ಎಸ್ ಬಸ್ತವಾಡ,ಎಸ್ ಎ ಗೊಡಸೆ,ಎಸ್ ಎಮ್ ಮೇತ್ರಿ,ಬಿ.ಆರ್.ವ್ಯಾಪಾರಿ, ಎಸ್ ಎಸ್ ನಂದಿವಾಲೆ,ವಾಯ್ ಎಸ್ ಲಾಳಿ,ಆರ್ ಎಲ್ ಗಸ್ತಿ,ಎ.ವಿ.ಬಾಳಿಗೇರಿ,ಬಿ.ಎಸ್ ಪಾಟೀಲ, ಎಸ್ ಎಸ್ ಹಡಪದ,ಎಸ್ ಎಸ್ ಕಾಂಬಳೆ,ಎಮ್ ಪಾಟೀಲ, ಎ ಎಮ್ ಪೂಜೇರಿ,ಆರ್ ಎಮ್ ನಿಜಗುಣಿ,ವಿನೋದ ಠಕ್ಕಣ್ಣವರ,ಮುಂತಾದವರು ಪಾಲ್ಗೊಂಡಿದ್ದು,ಈ ಪ್ರಕರಣದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲ ಸಿಬ್ಬಂದಿಗಳಿಗೆ ಡಾ.ಸಂಜೀವ್ ಪಾಟೀಲ್ ಅವರು ೧೦,೦೦೦ ಸಾವಿರ ನಗದು ಬಹುಮಾನವನ್ನು ಘೋಷಿಸಿ ಪೋಲಿಸರ ಕಾರ್ಯವನ್ನ ಪ್ರಶಂಸಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!