ಕವಲಗುಡ್ಡ ಸಿದ್ಧಸಿರಿ ಸಿದ್ಧಾಶ್ರಮದಲ್ಲಿ ಧಾರ್ಮಿಕ ವಿಧಿ ವಿಧಾನಗಳ ತರಬೇತಿ

Share the Post Now

ಬೆಳಗಾವಿ :ಕಾಗವಾಡ ತಾಲೂಕಿನ ಕವಲಗುಡ್ಡದ ಸಿದ್ಧಸಿರಿ ಸಿದ್ಧಾಶ್ರಮದಲ್ಲಿ ಸುಧರ್ಮ ಟ್ರಸ್ಟ್ ಬೆಂಗಳೂರು.
ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ. ಮತ್ತು ಸಿದ್ಧಸಿರಿ ಸಿದ್ದಾಶ್ರಮ ಕವಲಗುಡ್ಡ. ಇವರುಗಳ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕವಲಗುಡ್ಡ ಗ್ರಾಮದಲ್ಲಿ ಧಾರ್ಮಿಕ ವಿಧಿ ವಿಧಾನಗಳ ತರಬೇತಿ ಜರುಗಲಿದೆ.

ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 12ರ ವರೆಗೆ ದೇವಸ್ಥಾನದ ಪೂಜಾರಿ, ಒಡೇಯರು, ಅರ್ಚಕ ವರ್ಗದವರಿಗೆ ದೇವಾಲಯದಲ್ಲಿ ಒಂದು ಶ್ಲೋಕ, ಮಂತ್ರ, ಪೂಜಾ ವಿಧಾನ, ಪೂಜಾ ಪದ್ಧತಿ, ಎಲ್ಲಾ ಅಂಶಗಳನ್ನೊಳಗೊಂಡ ತರಬೇತಿಯನ್ನು ಕವಲಗುಡ್ಡ ಗ್ರಾಮದಲ್ಲಿ ಪರಮಪೂಜ್ಯ ಸಿದ್ದಯೋಗಿ ಅಮರೇಶ್ವರಪ್ಪಾಜಿಯವರ ಶ್ರೀಮಠದಲ್ಲಿ 50 ಜನ ಶಿಬಿರಾರ್ಥಿಗಳಿಗೆ 18 ದಿನಗಳ ಕಾಲ ಉಚಿತವಾಗಿರುವಂತಹ ಈ ಒಂದು ಧಾರ್ಮಿಕ ವಿಧಿ ವಿಧಾನಗಳ ಶಿಬಿರ ಹಮ್ಮಿಕೊಳ್ಳಲಾಗಿದೆ.


ಈ ಶಿಬಿರಕ್ಕೆ ಬೆಳಗಾವಿ ವಿಜಯಪುರ ಬಾಗಲಕೋಟೆ ಗದಗ ಧಾರವಾಡ ಎಲ್ಲ ಜಿಲ್ಲೆಯ ದಲಿತ, ಹಿಂದುಳಿದ ವರ್ಗಗಳ ದೇವಸ್ಥಾನದ ಪೂಜಾರಿಗಳು, ಒಡೇಯರು, ಆರಾಧಕರು, ಅರ್ಚಕರು, ಇವರಿಗೆ ನಾಡಿನ ಶ್ರೇಷ್ಠ ಅರ್ಚಕರಿಂದ ಈ ತರಬೇತಿಯನ್ನು ನೀಡಲಾಗುತ್ತಿದ್ದು, ಎಲ್ಲಾ ಪೂಜಾರಿ ವರ್ಗದವರು ಅರ್ಚಕ ವರ್ಗದವರು ಒಡೆಯರ್ ಬಂಧುಗಳು ಹಾಗೂ ಇನ್ನುಳಿದ ಎಲ್ಲಾ ದೇವಸ್ಥಾನದ ನಿರ್ವಹಣೆ ಮಾಡುವ ಮುಖ್ಯಸ್ಥರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ: ಬಸವರಾಜ ಖೋತ- 9535771002
ಬಾಗಲಕೋಟೆ: ಬಸವರಾಜ ಬಾಳೆಕಾಯಿ-9482456429
ವಿಜಯಪುರ: ಸಾಬು ಮಾಶ್ಯಾಳ 9900248096 ಸಂಪರ್ಕಿಸಬಹುದಾಗಿದೆ.

Leave a Comment

Your email address will not be published. Required fields are marked *

error: Content is protected !!