ಹಳ್ಳೂರ ತೀವ್ರತರ ಅತಿಸಾರ ಬೇದಿ ನಿಯಂತ್ರಣದಲ್ಲಿಡಲು ಬಾಣಂತಿಯರ ಹಾಗೂ ನವಜಾತ ಶಿಶುವಿನ ಮನೆ ಮನೆಗೆ ತೆರಳಿ ಲಕ್ಷಣ ಕಂಡು ಬಂದಲ್ಲಿ ರೋಗ ಹರಡದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆಗೆ ತೆರಳಿ ಮಾಹಿತಿ ನೀಡುವ ಪ್ರಾಮಾಣಿಕ ಕೆಲಸವನ್ನು ಮಾಡಬೇಕೆಂದು ತಾಲೂಕಾ ವೈದ್ಯಾಧಿಕಾರಿ ಡಾ ಭಾರತಿ ಕೋಣಿ ಅವರು ಹೇಳಿದರು.
ಅವರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ತೀವ್ರ ತರ ಅತೀ ಸಾರ ಬೇಧಿ ನಿಯಂತ್ರಣ ಪಾಕ್ಷಿಕ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದ ಪ್ರತೀ ಮನೆಗೆ ತೆರಳಿ ಸ್ವಚ್ಚತೆ ಹಾಗೂ ನೀರಿನ ಮೂಲಗಳ ಬಗ್ಗೆ ಮೇಲಿಂದ ಮೇಲೆ ಕೈ ತೊಳೆದುಕೊಳ್ಳುವ ಬಗ್ಗೆ ಹಾಗೂ ನವಜಾತ ಶಿಶುವಿನ ಆರೈಕೆ ಮಾಡುವ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು. ಎಲ್ಲರೂ ನಿಮ್ಮ ಕೆಲಸವನ್ನು ಸರಿಯಾಗಿ ಮಾಡಬೇಕೆಂದು ಕಡಕ್ ಎಚ್ಚರಿಕೆ ನೀಡಿದರು.
ಈ ಸಮಯದಲ್ಲಿ ಕೆ ಕೆ ಹರಿಜನ. ಜಿ ಏಸ್ ದವಳೇಶ್ವರ. ದೀಪಾ ಬಡಿಗೇರ. ಮಲ್ಲಪ್ಪ ಹೊಸಟ್ಟಿ. ಮಲ್ಲಪ್ಪ ರಡರಟ್ಟಿ. ಶಿಕ್ಷಕರಾದ ಕೆ ಕೆ ಗುಳೆದ. ಪ್ರಕಾಶ ಮೋರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ. ಅರ್ಜುನ ಕೂಲಿಗೊಡ.ಆಶಾ ಸುಗಮಕಾರ ವಿದ್ಯಾ ರಡರಟ್ಟಿ. ಅನೀತಾ ಮೋರೆ.ವತ್ಸಲಾ ಹಿರೇಮಠ. ಸುಜಾತಾ ಕೂಲಿಗೊಡ.ಲಕ್ಷ್ಮೀ ಲೋಕನ್ನವರ. ಶೋಭಾ ತೇರದಾಳ. ಯಮನವ್ವ ಶಹಾಪೂರ ಸೇರಿದಂತೆ ಅಶಾ, ಅಂಗನವಾಡಿ ಕಾರ್ಯಕರ್ತೆಯರು ಶಾಲಾ ಹಾಗೂ ಆಸ್ಪತ್ರೆ ಸಿಬ್ಬಂದ್ದಿಗಳಿದ್ದರು.