ರಾಯಬಾಗ:ತಾಲ್ಲೂಕಿನ ಸಿದ್ದಾಪುರ ಗ್ರಾಮದ ದಲಿತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಾದ ಕು.ಶಶಾಂಕ ಸುರೇಶ ಗಸ್ತಿ, ಮದಬಾವಿ ಮುರಾರ್ಜಿ ವಸತಿ ಶಾಲೆಯ ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರತಿಶತ 98.8% ರಷ್ಟು ಮಾಡಿ ಅಪೂರ್ವ ಸಾಧನೆ ಮಾಡಿದ್ದಾನೆ.
ಇದೇ ಗ್ರಾಮದ ಕು.ಸ್ವಾತಿ ವಿಠಲ್ ಗಸ್ತಿ ತಾಲ್ಲೂಕಿನ ಸುಟ್ಟಟ್ಟಿ ಮುರಾರ್ಜಿ ವಸತಿ ಶಾಲೆಯ ಆಂಗ್ಲ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಪ್ರತಿಶತ 89.76 % ರಷ್ಟು ಅಂಕ ಸಂಪಾದಿಸಿ ದಲಿತ ಸುಮುದಾಯಕ್ಕೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.ಈ ಅಭೂತಪೂರ್ವ ಸಾಧನೆಗೆ ಬಡತನ ಅಡ್ಡಿಯಾಗಲಿಲ್ಲ.
ಕೃಷಿ ಕೂಲಿ ಕುಟುಂಬದ ಹಿನ್ನೆಲೆಯಲ್ಲಿ ಅರಳಿದ ಈ ಇಬ್ಬರು ವಿದ್ಯಾರ್ಥಿಗಳು ಹೆತ್ತ ತಂದೆ ತಾಯಿಗಳ ಸಂತೋಷ ಇಮ್ಮಡಿಗೊಳಿಸಿದ್ದಾರೆ. ಅಪೂರ್ವ ಸಾಧನೆ ಮಾಡಿದ ಈ ಉಭಯ ವಿದ್ಯಾರ್ಥಿಗಳನ್ನು ಗ್ರಾಮದ ಡಾ.ಅಂಬೇಡ್ಕರ್ ವೃತ್ತದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವ ಬಳಗದವರು ಇತ್ತೀಚೆಗೆ ಗ್ರಾಮದಲ್ಲಿ ಅಭಿಮಾನದಿಂದ ಸತ್ಕರಿಸಿದರು
ಈ ಸಂದರ್ಭದಲ್ಲಿ ಸಿ.ಆರ್.ಪಿ. ಶ್ರೀ ಪಿ.ಎಸ್.ಕಾಂಬಳೆ, ಶಿಕ್ಷಕ ಶ್ರೀ ರಮೇಶ ಕಾಂಬಳೆ, ಶ್ರೀ ರಾಜು ಗಸ್ತಿ,ಪ್ರಕಾಶ,ಉಮೇಶ, ಚೆನ್ನಪ್ಪ, ಸುನೀಲ, ಮಹಾವೀರ, ಹಾಗೂ ಗ್ರಾಮದ ಎಲ್ಲ ಯುವಕರು, ಹಿರಿಯರು, ಮುದ್ದು ಮಕ್ಕಳು ಉಪಸ್ಥಿತರಿದ್ದರು.
*ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*