ಪ್ರಾಧ್ಯಾಪಕ ಡಾ.ಜಯವೀರ ಎ.ಕೆ ಅವರಿಗೆ ಸನ್ಮಾನ

Share the Post Now

ರಾಯಬಾಗ:ತಾಲ್ಲೂಕಿನ ಖೇಮಲಾಪುರ ಗ್ರಾಮದ ,ಪ್ರಸ್ತುತ ಶಿರಗುಪ್ಪಿಯ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ವಾಣಿಜ್ಯ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರು,ಸಾಹಿತಿ ಡಾ.ಜಯವೀರ ಎ.ಕೆ.ಅವರು ಕಳೆದ ವರುಷ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಪ್ರಯುಕ್ತ ರಾಯಬಾಗ ಪಟ್ಟಣದ ಹೆಸರಾಂತ ಅಂತರಾಷ್ಟ್ರೀಯ ಚಿತ್ರಕಲಾವಿದರು, ಪ್ರತಿಷ್ಠಿತ ರಾಜ್ಯಮಟ್ಟದ ಡಾ.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರಾದ ಡಾ.ಬಾಬುರಾವ ನಡೋಣಿ ಹಾಗೂ ಅವರ ಧರ್ಮಪತ್ನಿ, ಆದರ್ಶ ಗುರುಮಾತೆಯರು,ಹಾಗೂ ಖ್ಯಾತ ಚಿತ್ರಕಲಾವಿದೆಯರಾದ ಶ್ರೀಮತಿ ಆಶಾರಾಣಿ ಬಾಬುರಾವ ನಡೋಣಿ ಅವರು ಇಂದು ಅವರ “ಕಮಲಧಾಮ” ನಿವಾಸದಲ್ಲಿ ಡಾ.ಜಯವೀರ ಅವರನ್ನು ಅಭಿಮಾನ ಹಾಗೂ ಆತ್ಮೀಯವಾಗಿ ಶಾಲು ಹೊದಿಸಿ ಗ್ರಂಥ ಸಮರ್ಪಿಸಿ ಫಲತಾಂಬೂಲು ನೀಡಿ ಸತ್ಕರಿಸಿದರು.

ಸಾಹಿತ್ಯ ಲೋಕದಲ್ಲಿ ಹಾಗೂ ಗಟ್ಟಿ ಹೆಜ್ಜೆಗಳನ್ನು ಇರಿಸಿ ವಿಭಿನ್ನವಾಗಿ ಗುರುತಿಸಿಕೊಂಡು ವಾಚಕರ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗಿ ಕಂಗೊಳಿಸಬೇಕೆಂದು ಶುಭ ಕೋರಿದರು.ಪತ್ರಿಕಾ ವಲಯದಲ್ಲಿ ಕ್ರಿಯಾಶೀಲತೆ ಮೈಗೂಡಿಸಿಕೊಂಡ ತಮ್ಮ ವೃತ್ತಿ ನಿಷ್ಠೆ ಹಾಗೂ ಬದ್ಧತೆ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ಸೂಚಿಸಿದರು.

ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!