ಹಳ್ಳೂರ.
ಗೋದಾವರಿ ಬೈಯೋರಿಪೈನರೀಜ್ ಲಿ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ಅವರು ಸೇವಾ ವೃತ್ತಿಯಿಂದ ವಯೋ ನಿವೃತ್ತಿ ಹೊಂದಿದರು. ಈ ಹಿನ್ನಲೆಯಲ್ಲಿ ಕಾರ್ಖಾನೆಯು ಆಡಳಿತ ಅಧಿಕಾರಿಗಳು ಹಾಗೂ ಕಾರ್ಮಿಕ ಬಂದುಗಳು, ಹಿತೈಷಿಗಳು ವಿನೂತನ ಎತ್ತಿನ ಗಾಡಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸಂಭ್ರಮಾಚರಣೆ ಮಾಡಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ಈ ಸಂಧರ್ಭದಲ್ಲಿ ಮಾತನಾಡಿದ ಸಕ್ಕರೆ ವಿಭಾಗದ ಜನರಲ್ ಮ್ಯಾನೇಜರ್ ದಿನೇಶ್ ಶರ್ಮಾ ವೃತ್ತಿಯಲ್ಲಿರುವ ಪ್ರತಿಯೊಬ್ಬರಿಗೂ ನಿವೃತ್ತಿ ಎಂಬುದು ಸರ್ವೇ ಸಾಮಾನ್ಯ ಸರ್ಕಾರದ ನಿಯಮದ ಪ್ರಕಾರ ವೃತ್ತಿಯಲ್ಲಿರುವ ವ್ಯಕ್ತಿಗೆ 60 ವರ್ಷ ಆಗುತ್ತಿದ್ದಂತೆ ವಯೋ ನಿವೃತ್ತಿ ಹೊಂದಲೇಬೇಕು. ಆದರೆ ವೃತ್ತಿಯಲ್ಲಿದ್ದಾಗ ನಾವೂ ಮಾಡಿದ ಒಳ್ಳೆಯ ಕೆಲಸ ಕಾರ್ಯ ಜನರ ಮದ್ಯೆ ಪ್ರೀತಿ ವಿಶ್ವಾಸ ನಂಬಿಕೆ ಗಳಿಸಿದ ವ್ಯಕ್ತಿ ನಿವೃತ್ತಿ ನಂತರವೂ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಬೇಕೆಂದು ತಿಳಿಸಿಕೊಡುತ್ತದೆ. ವೃತ್ತಿಯಿಂದ ನಿವೃತ್ತಿಯಾದರು ಅವರ ಒಳ್ಳೆಯತನ ಕರ್ತವ್ಯ ನಿಷ್ಠೆ ಸ್ನೇಹ ಪರತೆಯಿಂದ ನಮ್ಮ ಹೃದಯದಲ್ಲಿ ಸದಾ ಕಾಲವಿರುತ್ತಾರೆಂದು ಹೇಳಿದರು.
ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ಮಾತನಾಡಿ ಕಾರ್ಖಾನೆಯಲ್ಲಿ 38 ವರ್ಷಗಳ ಕಾಲ ಮೆಕ್ಯಾನಿಕಲ್ ವಿಭಾಗದಲ್ಲಿ ಸಹದ್ಯೋಗಿ ಮಿತ್ರರೊಡನೆ ಬೆರೆತು ಕೆಲಸ ಮಾಡಿದ್ದು ನನಗೆ ಸಂತೋಷದಾಯಕವಾಗಿದ್ದು ಈ ಕಾರ್ಖಾನೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ಯಾವುದಕ್ಕೂ ಕೊರತೆ ಇಲ್ಲವೆಂದು ಹೇಳಿದರು.
ಇಂಜಿನಿಯರ್ ಜಿ ಎಂ ವಿ ಕೆ ಕಿಲಾರಿ ಹಾಗೂ ಮಜದೂರ ಯುನಿಯನ್ ಅಧ್ಯಕ್ಷ ಬಸವರಾಜ ಪೂಜಾರಿ ಮಾತನಾಡಿ ಕಾರ್ಖಾನೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ವಯೋ ನಿವೃತ್ತಿ ಆಗುತ್ತಿರುವ ಬಸವರಾಜ್ ಚನ್ನಾಳ ಅವರ ನಿವೃತ್ತಿ ಜೀವನವು ಸುಖಕಾರವಾಗಿರಲೆಂದು ಶುಭ ಹಾರೈಸಿದರು.
ಈ ಸಮಯದಲ್ಲಿ ಎ ಜಿ ಎಂ ಪಿ ಎಮತ್ತು ಐ ಆರ್ ಎಂ ರಾಮಚಂದ್ರ. ಪಿ ಬಿ ಆಲೂರ. ಎಸ್ ಬಿ ಬಿ ಪಾಟೀಲ. ನಾಗೇಶ ಮಾಳಿ. ಬಸವರಾಜ್ ಮೇಲಪ್ಪಗೊಳ. ಮನೋಹರ್ ಬಡಿವಾಳ. ಕಲ್ಲಪ್ಪ ವಾಜೆಂತ್ರಿ. ಚನ್ನಪ್ಪ ಅಥಣಿ. ಆರ್ ಡಿ ಪೂಜಾರ. ವಿನೋದ ಕಮತೆ. ಈಶ್ವರ ಕುಲ್ಲೋಳಿ. ರವಿ ಕುರಬರ. ಮುರಿಗೆಪ್ಪ ಮಾಲಗಾರ. ಆನಂದ ಶೇಗುಣಸಿ. ಮಲ್ಲು ಬಳಿಗಾರ. ಎಸ್ ಎ ಚೌಗಲಾ. ಎಂ ಬಿ ನಾಯ್ಕ ಸೇರಿದಂತೆ ಆಡಳಿತ ಮಂಡಳಿ ಯುನಿಯನ್ ಪದಾಧಿಕಾರಿಗಳು, ಹಾಗೂ ಕಾರ್ಮಿಕರಿದ್ದರು