ಬೆಳಗಾವಿ. ಅಥಣಿ
ವರದಿ -ರವಿ ಬಿ ಕಾಂಬಳೆ
ಯುಗಾದಿ ಹಬ್ಬದ ದಿನವೇ ಇಬ್ಬರು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನಡೆದಿದೆ.
ದೇವರಿಗೆ ನೈವೇದ್ಯ ಕೊಟ್ಟು ಬರುವಾಗ ಈ ಅವಘಡ ಸಂಭವಿಸಿದ್ದು, ಮೃತರನ್ನು ಸಪ್ತಸಾಗರ ಗ್ರಾಮದ ಶ್ರೀಧರ್ ಪಾರಿಸ್ ಹೊಸೂರು (15)
ಹರ್ಷಿತಾ ಶೀತಲ ಚಿಪ್ಪಾಡಿ (8) ಎಂದು ಗುರುತಿಸಲಾಗಿದೆ.
ಪ್ಲೇಟ್ ತೊಳೆಯಲು ಹೊಗಿ ಕೃಷಿ ಹೊಂಡದಲ್ಲಿ ಬಿದ್ದ ಹರ್ಷಿತಾಳನ್ನು ರಕ್ಷಿಸಲು ಹೋಗಿ ಶ್ರೀಧರ್ ಕೂಡಾ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ