ಬರುವ ಚುನಾವಣೆ ಕೇವಲ ಓರ್ವ ಶಾಸಕನನ್ನು ಮಂತ್ರಿಯನ್ನು ಆಯ್ಕೆ ಮಾಡುವ ಚುನಾವಣೆ ಅಲ್ಲ ಬರುವ ಚುನಾವಣೆ ಕರ್ನಾಟಕದ ಮುಂದಿನ ಭವಿಷ್ಯವನ್ನು ಭದ್ರ ಪಡಿಸುವ ಚುನಾವಣೆಯಾಗಿದೆ ಆದ್ದರಿಂದ ಕರ್ನಾಟಕದ ಮತಬಾಂಧವರು ವಿಶೇಷವಾಗಿ ವಿಶೇಷವಾಗಿ ಉತ್ತರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಡಾಕ್ಟರ್ ರವಿ ಪಾಟೀಲ್ ಪರ ಮತ ಚಲಾಯಿಸಿ ಬಿಜೆಪಿ ಸರಕಾರವನ್ನು ರಾಜ್ಯದಲ್ಲಿ ಮರು ಸ್ಥಾಪಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು.
ಬೆಳಗಾವಿ ನಗರದ ಗಣಪತಿಯಲ್ಲಿ ಬೃಹತ್ ರೋಡ್ ಶೋ ಹಾಗೂ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಕಾಂಗ್ರೆಸ್ ಪಕ್ಷವನ್ನು ದೇಶದಿಂದ ಹೊರಹಾಕಬೇಕಾಗಿದೆ ಹಾಗೂ ಭಾರತೀಯ ಜನತಾ ಪಕ್ಷದ ಸುಭದ್ರ ಸರ್ಕಾರವನ್ನು ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸ್ಥಾಪಿಸಬೇಕಿದೆ ಎಂದು ಹೇಳಿದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಧರ್ಮದ ಹೆಸರಿನಲ್ಲಿ ನೀಡಿದ ಮೀಸಲಾತಿಯನ್ನು ತೆಗೆದುಹಾಕಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಲಿಂಗಾಯತರಿಗೆ ಮೀಸಲಾತಿ ಹೆಚ್ಚಿಸಿ ನ್ಯಾಯ ಒದಗಿಸಲಾಗಿದೆ. ಜನರ ಅಶ್ವತರಿಗಳಿಗೆ ಸ್ಪಂದಿಸಿ , ಜನಪರ ಕೆಲಸ ನಿರ್ವಹಿಸುತ್ತಿರುವ ಬಿಜೆಪಿ ಸರ್ಕಾರವನ್ನು ಮರು ಸ್ಥಾಪಿಸಲು ಮತದಾರರು ಸನ್ನದ್ಧರಾಗಬೇಕಾಗಿದೆ ಎಂದು ಹೇಳಿದರು.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆ ಭಾರತೀಯ ಜನತಾ ಪಕ್ಷದ ಕೋಟೆಯಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಶಾಸಕರು ಆರಿಸಿ ಬರಬೇಕಾಗಿದೆ.
ಜಿಲ್ಲೆಯಲ್ಲಿ ಕಂಡುಬಂದ ಅಭೂತಪೂರ್ವ ಜನ ಬೆಂಬಲ ನೋಡಿದರೆ ಭಾರತೀಯ ಜನತಾ ಪಕ್ಷ 18 ವಿಧಾನಸಭಾ ಕ್ಷೇತ್ರಗಳಲ್ಲಿ 16 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮತದಾರರಿಗೆ ಕರೆ ನೀಡಿದ ಅಮಿತ್ ಷಾ ತಾವು ವಾಪಸ್ ಹೋದ ಬಳಿಗೆ ಪ್ರತಿಯೊಬ್ಬರು ತಮ್ಮ ಸಂಬಂಧಿಕರು ಸ್ನೇಹಿತರು ಬಂಧುಗಳನ್ನು ಭೇಟಿ ಮಾಡಿ ಕಮಲ ಚಿಹ್ನೆಯ ಪರ ಮತದಾನ ಮಾಡುವಂತೆ ಅವರನ್ನು ಉತ್ತೇಜಿಸಬೇಕು ಎಂದು ಹೇಳಿದರು.
2024ರಲ್ಲಿ ದೇಶ ಮತ್ತೆ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಲಿದೆ ದೇಶದಲ್ಲಿ ಪುನಹ ಬಲಾಢ್ಯ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಸ್ಥಾಪಿಸುವತ್ತ ಸನ್ನದ್ಧರಾಗಬೇಕಿದೆ ಎಂದು ಹೇಳಿದರು.
ಸದ್ಯ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ
ಡಾಕ್ಟರ್ ರವಿ ಪಾಟೀಲ್ ಪರ ಮತದಾರರು ಮತ ಚಲಾಯಿಸಿ ಪ್ರಚಂಡ ಬಹುಮತದಿಂದ ಡಾಕ್ಟರ್ ರವಿ ಪಾಟೀಲ್ ಅವರನ್ನು ಆರಿಸಿ ತರಬೇಕು ಎಂದು ವಿನಂತಿಸಿದರು.
ಅಭ್ಯರ್ಥಿ ಡಾಕ್ಟರ್ ರವಿ ಪಾಟೀಲ್ ಮಾತನಾಡಿ ಮೇ 10 ರ ಚುನಾವಣೆಯಲ್ಲಿ ಎಲ್ಲರೂ ಭಾಗಿಯಾಗಿ ತಮ್ಮ ಆತ್ಯ ಅಮೂಲ್ಯ ಮತವನ್ನು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ತಮಗೆ ನೀಡಬೇಕೆಂದು ವಿನಮ್ರವಾಗಿ ವಿನಂತಿಸಿದರು.
ಕ್ಷೇತ್ರದ ಜನ ತೋರಿದ ಪ್ರೀತಿ ವಿಶ್ವಾಸಕ್ಕೆ ಅಭಾರಿಯಾಗಿದ್ದೇನೆ ಎಂದು ತಿಳಿಸಿದರು
ಬೆಳಗಾವಿ ಸಂಸದೆ ಮಂಗಳ ಅಂಗಡಿ ಶಾಸಕ ಅನಿಲ್ ಬೆನಿಕೆ ಉಪಸ್ಥಿತರಿದ್ದರು.
ಇದಕ್ಕೂ ಪೂರ್ವದಲ್ಲಿ ನಡೆದ ಬೃಹತ್ ರೋಡ್ ಶೋ ಕಣ್ಮನ ಸೆಳೆಯುವಂತಿತ್ತು. ಕೇಂದ್ರ ಗ್ರಹ ಸಚಿವ ಅಮಿತ್ ಶಾ ರವರ ರೋಡ್ ಶೋಗೆ ಬೆಳಗಾವಿ ನಗರದಾದ್ಯಂತ ವಿಶೇಷ ಭದ್ರತೆ ಕಲ್ಪಿಸಲಾಗಿತ್ತು.





