ಬೆಳಗಾವಿ
ರಾಯಬಾಗ ಪಟ್ಟಣದ ಮಹಾವೀರ ಭವನದಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಮತ್ತು ವಿಶ್ವ ಭಗೀರಥ ಟ್ರಸ್ಟ ಇವರ ಸಹಯೋಗದಲ್ಲಿ ಉಪ್ಪಾರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಅದ್ಧೂರಿಯಾಗಿ ನೆರವೇರಿತು
ಕಾರ್ಯಕ್ರಮವನ್ನು ಶ್ರೀ ಭಗೀರತನಂದಪುರಿ ಸ್ವಾಮಿಜಿ ಹಾಗೂ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ದುರ್ಯೋಧನ ಐಹೊಳೆ ನನ್ನ ಕ್ಷೇತ್ರದಲ್ಲಿ ತಮ್ಮ ಸಮಾಜಕ್ಕೆ ಹೆಚ್ಚಿನ ಮಾನ್ಯತೆ ನೀಡಿದ್ದು ಹಿಂದುಳಿದ ಉಪ್ಪಾರ ಸಮಾಜ ಇನ್ನೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ರಾಜ್ಯ ಕಾಂಗ್ರೆಸ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ನಿಗಮಗಳ ಹಣ ದುರುಪಯೋಗ ಮಾಡಿಕೊಂಡಿದ್ದರಿಂದ ಉಪ್ಪಾರ ಅಭಿವೃದ್ಧಿ ನಿಗಮ ಸೇರಿದಂತೆ ಇನ್ನುಳಿದ ಯಾವುದೇ ನಿಗಮಗಳಿಗೆ ಹಣ ಬಿಡುಗಡೆ- ಯಾಗದೆ ಇರುವುದರಿಂದ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು. ಉಪ್ಪಾರ ಸಮಾಜದವರು ತಮ್ಮ ಮಕ್ಕಳಿಗೆ
ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕು. ಮತ್ತು ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕೆಂದರು. ಉಪ್ಪಾರ ಸಮಾಜಕ್ಕೆ ಭವನ ನಿರ್ಮಿಸಲು ರೂ.10 ಲಕ್ಷ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ, ಉಪ್ಪಾರ ಸಮಾಜ ರಾಜ್ಯಾದ್ಯಂತ ಸುಮಾರು 50 ಲಕ್ಷ ಜನಸಂಖ್ಯೆ ಹೊಂದಿದ್ದರು. ರಾಜಕೀಯವಾಗಿ ಯಾವುದೇ ಉನ್ನತ ಸ್ಥಾನಮಾನ ದೊರಕಿರುವುದಿಲ್ಲ. ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಸಮಾಜದ ಮುಖಂಡರನ್ನು ನೇಮಕ ಮಾಡಬೇಕು. ಸಮಾಜಕ್ಕೆ ದೊರಕಬೇಕಾದ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಸಾಧನೆ ಮಾಡಿದ ಸಮಾಜದ ಸಾಹಿತಿ ಡಾ.ಲಕ್ಷ್ಮಣ ಚೌರಿ, ಡಾ.ಸಂಜೀವ ದಂಪತಿಗಳು ಇತರ ಸಾಧಕರನ್ನು ಸತ್ಕರಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕಿನ ಹಲವು ಗ್ರಾಮ ಘಟಕಗಳನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಈಶ್ವರ ಶಿರಕೋಳ, ಉಪ್ಪಾರ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಸಿದ್ದವ್ವ ಖಿಲಾರೆ. ಮಕ್ಕಳ ಸಾಹಿತಿ ಲಕ್ಷಣ ಚೌರಿ, ರಾಘವೇಂದ್ರ ಖಿಲಾರೆ, ಸುಧೀರ ಉಪ್ಪಾರ, ರಾಮಕೃಷ್ಣ ಬಬಲಿ, ಮಂಜುನಾಥ ರಾಜಪ್ಪಣ್ಣವರ, ದೊಡ್ಡವ್ವ ಉಪ್ಪಾರ, ಸುನಂದಾ ಉಪ್ಪಾರ, ರೇಖಾ ಲಕ್ಕುಂಡಿ, ಲಕ್ಷ್ಮೀ ಉಪ್ಪಾರ, ಲಕ್ಕಪ್ಪ ಕರಲಿಂಗನಿವ್ವರ, ಮಾರುತಿ ಮೇಲವಂಕಿ, ಡಾ. ಟೋನಿ ದಂಪತಿಗಳು, ಡಾ. ಪ್ರದೀಪ ಸೇರಿ ಇತರರು ಉಪಸ್ಥಿತರಿದ್ದರು.
ವರದಿ: ಸಂಜೀವ ಬ್ಯಾಕುಡೆ, ರಾಯಬಾಗ