ರಾಯಬಾಗ:~ *ಗದುಗಿನ ಪಂಡಿತ ಪಂಚಾಕ್ಷರಿ ಗವಾಯಿಗಳವರ 79 ನೇಯ ಪುಣ್ಯಸ್ಮರಣೋತ್ಸವದ ನಿಮಿತ್ತ ಮತ್ತು ಅಂಧ ಅನಾಥರ ಬಾಳಿನ ಜ್ಯೋತಿ, ಪದ್ಮ ಭೂಷಣ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 13 ನೇ ಪುಣ್ಯಾರಾಧನೆ*
ನಿಮಿತ್ಯವಾಗಿ ಹಮ್ಮಿಕೊಂಡ ಜಾತ್ರಾ ಮಹೋತ್ಸವದಲ್ಲಿ ಅನೇಕ ಭಾಗದಿಂದ ಆಗಮಿಸಿದ್ದ ಶ್ರೀಮಠಗಳ ಪೂಜ್ಯರ ಉಪಸ್ಥಿತಿ ಮತ್ತು ಗಣ್ಯರ ಉಪಸ್ಥಿತಿಯ ಜೊತೆ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಗಡಿಭಾಗದ ಸುಕ್ಷೇತ್ರ ನಾಗಣಸೂರಿನ *ಜಗದ್ಗುರು ಬಸವಲಿಂಗೇಶ್ವರ ಸಂಸ್ಥಾನ ತುಪ್ಪಿನಮಠದ* ನೂತನ ಮಠಾಧಿಪತಿಗಳು, ಹಿಮಾಲಯ ಯೋಗಿ ಮ. ನಿ. ಪ್ರ ಡಾ. ಅಭಿನವ ಬಸವಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ
ಧರ್ಮೋತ್ತೇಜಕ ಮಹಾಸಭೆ ಇತ್ತೀಚೆಗೆ ನೆರವೇರಿತು.ಮಹಾಸಭೆ ಉದ್ದೇಶಿಸಿ ಮಾತನಾಡಿದ ಪೂಜ್ಯರು “ವೀರೇಶ್ವರ ಪುಣ್ಯಾಶ್ರಮದಲ್ಲಿ ಯಾವ ಜಾತಿ, ಯಾವ ಮತ, ಯಾವ ಪಂಗಡ ಎಂಬುದು ಬೇಕಾಗಿಲ್ಲ, ಸಮಾಜಕ್ಕೆ ಒಳಿತನ್ನು ಬಯಸಿ ಆಶ್ರಮಕ್ಕೆ ಬನ್ನಿ ಎಂಬ ವಿಚಾರದಂತೆ ಪೂಜ್ಯ ಡಾ.ಅಭಿನವ ಬಸವಲಿಂಗ ಮಹಾಸ್ವಾಮೀಜಿಯವರು ಸಮಾಜ ನಮಗೆ ಸಾಕಾಗುವಷ್ಟು ಕೊಡುಗೆ ನೀಡುತ್ತ ಬಂದಿದೆ ನಾವು ಸಹ ಈ ಸಮಾಜಕ್ಕೆ ನಮ್ಮಿಂದ ಸಾಧ್ಯವಾದಷ್ಟು ಕೊಡುಗೆ ನೀಡಬೇಕೆಂದು ಪೂಜ್ಯ ಡಾ. ಅಭಿನವ ಬಸವಲಿಂಗ ಮಹಾಸ್ವಾಮೀಜಿಯವರು ತಿಳಿಸಿದರು. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಆಶ್ರಮ ಇದು ತ್ರಿವೇಣಿ ಸಂಗಮ ಇದ್ದ ಹಾಗೆ,
ಈ ಪುಣ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಅಂಧ ಅನಾಥ ಮಕ್ಕಳಿಗೆ ನಮ್ಮ ಜಗದ್ಗುರು ಬಸವಲಿಂಗೇಶ್ವರ ಸಂಸ್ಥಾನ ತುಪ್ಪಿನಮಠದ ವತಿಯಿಂದ ಪೂಜ್ಯ ಡಾ. ಕಲ್ಲಯ್ಯಜ್ಜನವರ ಸನ್ಮಾನ ಕಾರ್ಯಕ್ರಮದ ಜೊತೆ 121 ಹೊದಿಕೆಯನ್ನು ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳಿಗೆ ನೀಡಿರುವುದಾಗಿ ಪೂಜ್ಯರು ತಿಳಿಸಿದರು.
ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*





