ಹಳ್ಳೂರ.
ಗ್ರಾಮಿಣ ಪ್ರದೇಶಗಳಲ್ಲಿ ಹೆಚ್ಚಾಗಿ ರೈತರು ವಾಸಮಾಡಿರುತ್ತಾರೆ ರೈತರಿಗೆ ಕೂಲಿಕಾರರಿಗೆ ಸಹಾಯ ಸಹಕಾರ ನೀಡಿ ಗ್ರಾಮದ ಶ್ರೇಯೋಭಿವೃದ್ಧಿಗೆ ಶ್ರಮ ಪಟ್ಟು ಒಳ್ಳೆಯ ಕೆಲಸ ಕಾರ್ಯ ಮಾಡುತ್ತಿದ್ದವರಿಗೆ ದೇವರ ಆಶಿರ್ವಾದ ಸದಾಕಾಲ ಇರುತ್ತದೆಂದು ಬಬಲಾದಿ ಮೂಲ ಸಂಸ್ಥಾನ ಮಠದ ವೇದ ಮೂರ್ತಿ ಚಂದ್ರಶೇಖರ ಹೀರೆಮಠ ಪೂಜ್ಯರು ಹೇಳಿದರು.
ಅವರು ಗ್ರಾಮದ ಯಮನಪ್ಪ ನಿಡೋಣಿ ಅವರ ತೋಟದಲ್ಲಿ ಹಮ್ಮಿಕ್ಕೊಂಡ ಸನ್ಮಾನ ಕಾರ್ಯ್ರಮದ ಸಾನಿಧ್ಯ ವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ ಜಾತಿ ಭೇದ ಭಾವ ಮಾಡದೆ ಎಲ್ಲರೂ ಒಗ್ಗಟ್ಟಾಗಿ ಪ್ರೀತಿ ವಿಶ್ವಾಸದಿಂದ ಜೀವನ ಸಾಗಿಸಬೇಕು. ಆಸ್ತಿ ಅಧಿಕಾರ ಅಂತಸ್ತು ಯಾವುದೂ ಸ್ಥಿರವಲ್ಲ ನಾವೂ ಸಮಾಜ, ಬೇರೆಯವರಿಗೆ ಮಾಡಿದ ಸಹಾಯ ಮಾತ್ರ ಕೊನೆಯವರೆಗೆ ಉಳಿದೂ ಆದ್ದರಿಂದ ಪುಣ್ಯ ಲಭಿಸುತ್ತದೆ.ಅನ್ಯಾಯ ಅಧರ್ಮದ ದಾರಿಯಲ್ಲಿ ಸಾಗಿದರೆ ಕೆಡುಕು ಕಟ್ಟಿಟ್ಟ ಬುತ್ತಿ,ಹಳ್ಳೂರ ಮಹಾಲಕ್ಷ್ಮೀ ದೇವಿ ಜಾಗೃತ ದೇವರಿದ್ದಾರೆ ನಂಬಿ ನಡೆದರೆ ಒಳ್ಳೆಯದು ಎಂದು ಹೇಳಿದರು. ವೇದಮೂರ್ತಿ ಚಂದ್ರಶೇಖರ ಹೀರೆಮಠ ಪೂಜ್ಯರನ್ನು ನಿಡೋಣಿ ಕುಟುಂಬದವರು ಸನ್ಮಾನಿಸಿ ಗೌರವಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭೀಮಶಿ ಮಗದುಮ.ಪಿಕೆಪಿಎಸ್ ನೂತನ ಅದ್ಯಕ್ಷರಾಗಿ ಆಯ್ಕೆಯಾದ ಮಹಾವೀರ ಛಬ್ಬಿ.ಸದಸ್ಯರಾದ ಯಾದಪ್ಪ ನಿಡೋಣಿ.ತುಕಾರಾಮ ಸನದಿ. ಬಾಳೆಶ ನೇಸುರ.ರೇವಪ್ಪ ಸಿಂಪಿಗೆರ.ಸೇರಿದಂತೆ ಅನೇಕ ಪ್ರಮುಖರಿಗೆ ಸನ್ಮಾನ ಮಾಡಿ ಗೌರವಿಸಿದರು. ನೂರಾರು ಜನರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ಸ್ವಾಗತಿಸಿ ನಿರೂಪಿಸಿದರು.