ಕುಡಚಿ ಮತಕ್ಷೇತ್ರದ ಹಾರೂಗೇರಿ ಪಟ್ಟಣದಲ್ಲಿ ಯಶಸ್ವಿಯಾಗಿ ಜರುಗಿದ ವಿಜಯ ಸಂಕಲ್ಪಯಾತ್ರೆ

Share the Post Now

ಬೆಳಗಾವಿ


ಬೆಳಗಾವಿ :ಮುಗಲಖೋಡ ಕ್ರಾಸ್ ಮಾರ್ಗವಾಗಿ ಬೃಹತ್ ಬೈಕ್ ರ್ಯಾಲಿ ಮೂಲಕ ವಿಜಯ ಸಂಕಲ್ಪ ಯಾತ್ರೆ ಹಾರೂಗೇರಿ ಪಟ್ಟಣಕ್ಕೆ ಆಗಮಿಸಿತು

ಮಾರ್ಗದುದ್ದಕ್ಕೂ ಕೇಸರಿ ಶಾಲು, ಬಿಜೆಪಿ ಪಕ್ಷದ ಬಾವುಟ ಹಿಡಿದ ಕಾರ್ಯಕರ್ತರು, ಪಿ.ರಾಜೀವ್‌ ಕಿ ಜೈ ಎಂದ ಕಾರ್ಯಕರ್ತರು

ಕುಡಚಿ ಮತಕ್ಷೇತ್ರದ ಹಾರೂಗೇರಿ ಪುರಸಭೆ ಕಾರ್ಯಾಲಯದ ಆವರಣದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಯ ಸಮಾವೇಶದಲ್ಲಿ ಸಸಿಗೆ ನೀರುಣಿಸಿ, ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಯಿತು


ಬೃಹತ್‌ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಮಾತನಾಡಿ ಹಿಂದುಳಿದ ಬಡವರ ದಿನದಲಿತರ ಹಾಗೂ ಮಹಿಳೆಯರ ಶ್ರೇಯೋಭಿರುದ್ಧಿಗಾಗಿ ಬಿಜೆಪಿ ಸರಕಾರವು ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ 50ವರ್ಷಕಿಂತ ಹೆಚ್ಚು ಆಳ್ವಿಕೆ ನಡಿಸಿದಂತ ಕಾಂಗ್ರೆಸ್ ಸರಕಾರವು ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ತಮ್ಮ ಖಜಾನೆ ತುಂಬಿಕೊಂಡಿದ್ದಾರೆ ಎಂದರು ಆದರೆ ನಮ್ಮ ಸರಕಾರ ಬಂದ ಮೇಲೆ ಶಿಕ್ಷಣವನ್ನು ಪಡೆದಂತಹ ವಿದ್ಯಾವಂತರನ್ನು ಗುರುತಿಸಿ ನಾವು ಉದ್ಯೋಗ ಮಾಡುತ್ತೇವೆ ಎಂದು ಮುಂದೆ ಬಂದವರನ್ನು ಉದ್ಯಮಿಗಳನ್ನಾಗಿ ನಮ್ಮ ಸರಕಾರ ಮಾಡುತ್ತಿದೆ ಎಂದರು

ನಂತರ ಮಾತನಾಡಿದ ಕುಡಚಿ ಶಾಸಕ ಪಿ. ರಾಜೀವ್ ಕರ್ನಾಟಕ ರಾಜ್ಯದಲ್ಲಿ ಎಲ್ಲೋ ಹುಟ್ಟಿರುವವಣಿಗೆ ಅವನ ಜಾತಿ. ಊರು ಯಾವುದು ಅಂತಾ ಗೊತ್ತಿಲ ಆ ವ್ಯಕ್ತಿಯನ್ನ ಮನೆ ಮಗನಂತೆ ನೋಡಿಕೊಂಡ ಕುಡಚಿ ಮತಕ್ಷೇತ್ರದ ಜನತೆಗೆ ನಾನು ಅಭಾರಿಯಾಗಿದ್ದೇನೆ ನಾನು ಎಷ್ಟು ಜನುಮಎತ್ತಿದರು ಕೂಡ ಈ ಋಣ ತೀರಿಸಲು ಸಾಧ್ಯವಿಲ್ಲ ಎಂದರು ಹಾಗಾಗಿ ಬರುವಂತಹ 2023ರರ ವಿಧಾನಸಭಾ ಚುನಾವಣೆಯಲ್ಲಿ ನನ್ನನು ಮತ್ತೊಮ್ಮೆ ಗೆಲ್ಲಿಸಿಬೇಕು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ಕೈಗಳನ್ನು ಮತ್ತಷ್ಟು ಗಟ್ಟಿಗೊಳಿಸಬೇಕೆಂದು ಕೇಳಿಕೊಂಡರು


ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ರಾಯಭಾಗ ಶಾಸಕ ದುರ್ಯೋಧನ ಐಹೋಳೆ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಮಾತನಾಡಿದರು

ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ| ರಾಜೇಶ ನೇರ್ಲಿ, ಅಬಯ್ ಮಾನವಿ, ಶಶಿಕಾಂತ ನಾಯಕ ಅರುಣ ಶಹಾಪುರ , ಮಲ್ಲಿಕಾರ್ಜುನ ಖಾನಗೌಡರ, ಬಸನಗೌಡ ಸಂಗಿ, ಡಿ.ಸಿ. ಸದಲಗಿ, ದುಂಡಪ್ಪ ಹಾಡಕಾರ, ಬಸವರಾಜ ಖೋತ, ಶಿವು ದಳವಾಯಿ, ಕಾಂತು ಬಾಡಗಿ, ಶಶಿಧರ ಶಿಂಗೇ ,ಸಂತೋಷ ಶಿಂಗಾಡಿ, ವಸಂತ ಲಾಳಿ, ಮಲ್ಲಪ್ಪ ಐನಾಪುರ, ವಿನಾಯಕ ಮೂಡಸಿ ಇನ್ನು ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು ಹಾಗೂ ಈ ಕಾರ್ಯಕ್ರಮದ ನಿರೂಪಣೆಯನ್ನು ಬಹುಸಾಬ್ ಕಾಂಬಳೆ ನೆರವೇರಿಸಿದರು

Leave a Comment

Your email address will not be published. Required fields are marked *

error: Content is protected !!