ವಿಜಯನಗರ:ಹೊಸಪೇಟೆ ತಾಲೂಕಿನ ಹಗರಿಬೊಮ್ಮನಹಳ್ಳಿ ಮೀಸಲು ಕ್ಷೇತ್ರದ ಬೇಡ ಜಂಗಮ ಸಮಾಜದ ವಿಧಾನ ಸಭೆಯ ಪಕ್ಷೇತರ ಅಭ್ಯರ್ಥಿ ಡಾ.ಎ.ಎಮ್.ಎ. ಸುರೇಶ ಅವರ ಪರ ಮರಿಯಮ್ಮನಹಳ್ಳಿ ಹಾಗೂ ಹಗರಿಬೊಮ್ಮನಹಳ್ಳಿ ಪಟ್ಟಣಗಳಲ್ಲಿ ರಾಜ್ಯ ಔಷಧ ತಜ್ಞರ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಶ್ರೀಮತಿ ಸಂಧ್ಯಾ ಪಾರ್ವತಿ,ಎರಡನೇ ಸುತ್ತಿನ ಪ್ರಚಾರ ನಡೆಸಿದ್ದಾರೆ.
ಡಾ.ವಿಲಾಸ ಹೊಸಪೇಟೆ,ಹಗರಿ ಮರೆಯಮ್ಮನಹಳ್ಳಿಯ ಔಷಧ ವ್ಯಾಪಾರಿಗಳಾದ ಪ್ರಭು ದೇವರು, ವಿನಯ್ ಮತ್ತು ಮಲ್ಲಯ್ಯ ಅಂಗಡಿ ಹೇರೂರ ಮುಂತಾದವರು ಮರೆಯಮ್ಮನಹಳ್ಳಿಯಲ್ಲಿ ಭಾಗವಹಿಸಿದ್ದರು.
ಹಗರಿಬೊಮ್ಮನಹಳ್ಳಿಯಲ್ಲಿಯೂ ಅಶೋಕಸ್ವಾಮಿ ಹೇರೂರ ಹಾಗೂ ಶ್ರೀಮತಿ ಸಂಧ್ಯಾ ಪಾರ್ವತಿ ಅಭ್ಯರ್ಥಿ ಡಾ.ಸುರೇಶ ಪರ ಮನೆ ಮನೆ ಪ್ರಚಾರ ನಡೆಸಿದ್ದು, ಡಾ.ಸುರೇಶ ಅವರ ಪತ್ನಿ ಪ್ರಿಯ ದರ್ಶಿನಿ ಮತ್ತು ಶ್ರೀಮತಿ ಸುನಂದಾ ಶಿವ ಪ್ರಕಾಶ,ಸುಮಾ ಚಂದ್ರಶೇಖರ, ಕಲಾವತಿ ದಯಾನಂದ,ಶ್ರೀಮತಿ ಶಿಲ್ಪಾ ಡಾ.ಪ್ರಶಾಂತ, ಚೈತ್ರಾ ಡಾ.ಪ್ರಕಾಶ,ಪೂರ್ವಿಕಾ ಡಾ.ಪ್ರವೀಣ ಮತ್ತು ಶ್ರೀಮತಿ ಉಷಾ ರಾಗಿ ದಯಾನಂದ ಪಾಲ್ಗೊಂಡಿದ್ದರು.
ಅಭ್ಯರ್ಥಿ ಡಾ.ಸುರೇಶ್ ಅವರ ಪರ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದ್ದು ,ಕ್ಷೇತ್ರದಲ್ಲಿ ಜೆ.ಡಿ.ಎಸ್.ಅಭ್ಯರ್ಥಿಯ ಜೊತೆ ಪೈಪೋಟಿ ಎರ್ಪಟ್ಟಿದೆ. ಕಾಂಗ್ರೆಸ್ ಮತ್ತು ಬಿ.ಜೆ.ಪಿ.ನೈಪತ್ಯಕ್ಕೆ ಸೇರಿವೆ.





