ಹಗರಿಬೊಮ್ಮನಹಳ್ಳಿ ಎಸ್.ಸಿ.,ಮೀಸಲು ವಿಧಾನ ಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಬೇಡ ಜಂಗಮ ಸಮಾಜದ ಡಾ.ಎ.ಎಮ್.ಎ. ಸುರೇಶ್ ಕುಮಾರ ಅವರ ಪರ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಮುಖಂಡ ಅಶೋಕಸ್ವಾಮಿ ಹೇರೂರ ಎರಡನೇ ಹಂತದ ಚುನಾವಣೆ ಪ್ರಚಾರಕ್ಕೆ ಅಣಿಯಾಗಿದ್ದಾರೆ.
ಎರಡು ದಿನಗಳಿಂದ ಕೊಟ್ಟೂರು ಪಟ್ಟಣದಲ್ಲಿ ಬೀಡು ಬಿಟ್ಟಿರುವ ಹೇರೂರ, ಎರಡನೇ ಸುತ್ತಿನಲ್ಲಿ ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಕೊಟ್ಟೂರು ನಿವಾಸಿಗಳಾದ ಶ್ರೀಮತಿ ಶೈಲಜಾ ಡಾ.ನಾಗಭೂಷಣ ಶಾಸ್ತ್ರಿ ,ಮನು ಶಾಸ್ತ್ರಿ , ಅಭಿಷೇಕ ಸ್ವಾಮಿ,ಶ್ರೀಮತಿ ಶೈಲಜಾ ಸರ್ಪಭೂಷಣ ಶಾಸ್ತ್ರಿ ಪ್ರಚಾರದಲ್ಲಿ ಭಾಗವಹಿಸಿದ್ದರು.
ಶಶಿಧರ ಸ್ವಾಮಿ ಮುದೇನೂರು ಹಿರೇಮಠ,
ಬಸಯ್ಯ ಸ್ವಾಮಿ ಶಿವನಗುತ್ತಿ ,ಮಲ್ಲಯ್ಯ ಸ್ವಾಮಿ ಹೇರೂರ, ಕಲ್ಯಾಣ ರಾವ್,ಜಗಧೀಶ್ ಜಂತಕಲ್, ಸಿ.ಚಿದಾನಂದ ಮುಂತಾದವರು ಅಶೋಕಸ್ವಾಮಿ ಹೇರೂರ ಅವರ ಜೊತೆ ಮನೆ-ಮನೆಗೆ ತೆರಳಿ ಮತಯಾಚನೆ ಮಾಡಿದರು.