ಬೆಳಗಾವಿ.ರಾಯಬಾಗ:* ತಾಲ್ಲೂಕಿನ ಬಾವನ ಸೌಂದತ್ತಿ ಗ್ರಾಮ ಪಂಚಾಯತಿಯ ಸದಸ್ಯರು ಬುಧವಾರ ದಿನಾಂಕ 13 ರಂದು ಕಾಗವಾಡ ತಾಲ್ಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯತಿಗೆ ಮುಖಂಡರ ನಿಯೋಗದೊಂದಿಗೆ ಭೇಟಿ ನೀಡಿ, ಗ್ರಾಮದಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯಗಳ ವಿಕ್ಷಣೆ ಮಾಡಿ, ವಿವಿಧ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಮತ್ತು ಗ್ರಾಮದ ಅನೇಕ ಮುಖಂಡರು ಕಾಗವಾಡ ತಾಲೂಕಿನ ಮಾದರಿ ಗ್ರಾಮ ಪಂಚಾಯತಿ, ಶಿರಗುಪ್ಪಿ ಗ್ರಾಮಕ್ಕೆ ಭೇಟಿ ನೀಡಿ, ಪಂಚಾಯತಿಯಿಂದ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದುಕೊಂಡರು.
ಈ ವೇಳೆ ವಿವಿಧ ಅಭಿವೃದ್ಧಿ ಅಭಿವೃದ್ಧಿ ಕಾರ್ಯಗಳ ಕುರಿತು ಮತ್ತು ತಮ್ಮ ಪಂಚಾಯತಿಯ ಕಾರ್ಯ ವೈಖರಿಯ ಕುರಿತು ಶಿರಗುಪ್ಪಿ ಗ್ರಾಮ ಪಂಚಾಯತ ಉಪಾಧ್ಯಕ್ಷ ರಾಮಗೌಡಾ ಪಾಟೀಲ ವಿವರವಾಗಿ ಮಾಹಿತಿ ನೀಡಿದರು.
ಇದೇ ವೇಳೆ ಶಿರಗುಪ್ಪಿ ಗ್ರಾ.ಪಂ. ಸದಸ್ಯ ವಿಜಯ ಅಕಿವಾಟೆ ಮಾತನಾಡಿ, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದಸ್ಯರು, ಒಗ್ಗಟ್ಟಿನಿಂದ, ಪಕ್ಷಾತೀತವಾಗಿ, ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಿದರೆ ಗ್ರಾಮದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಬಾವನಸೌಂದತ್ತಿ ಗ್ರಾ.ಪಂ. ಅಧ್ಯಕ್ಷರಾದ ರಾಮಚಂದ್ರ ಕಾಟೆ ಮಾತನಾಡಿ, ಶಿರಗುಪ್ಪಿಯಲ್ಲಿ ಅಭಿವೃದ್ಧಿಪಡಿಸಿದ ಅನೇಕ ಕಾಮಗಾರಿಗಳನ್ನು ವೀಕ್ಷಿಸಿದ್ದು, ಇದೇ ಮಾದರಿಯಲ್ಲಿ ಬಾವನಸೌಂದತ್ತಿ ಗ್ರಾಪಂ ಸದಸ್ಯರು, ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಗ್ರಾಮದಲ್ಲಿ ಅಭಿವೃದ್ಧಿಪಡಿಸಿ ಮಾದರಿ ಗ್ರಾಮ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಬಾವನಸೌಂದತ್ತಿ ಗ್ರಾಮದ ಮುಖಂಡರಾದ ಧೂಲಗೌಡ ಪಾಟೀಲ, ಸದಸ್ಯರಾದ ಅನೀಲ ಹಂಜೆ, ಬಾವನಸೌಂದತ್ತಿ ಪಿಡಿಓ ಎಸ್ ಎಸ್ ನ್ಯಾಮಗೌಡ, ಶಿರಗುಪ್ಪಿಯ ಭಾವುಸಾಬ ಕಾಗವಾಡೆ ಭಮ್ಮಣ್ಣಾ ಚೌಗುಲೆ, ಈರಗೌಡಾ ಪಾಟೀಲ, ಸಚಿನ ಕಾಂಬಳೆ, ಸಂತೋಷ ಕಿತಳೆ, ಮಹ್ಮದ ಗೌಂಡಿ, ಮನೋಹರ ಕಾತ್ರಾಳೆ, ಮುಸ್ತಾಕ ಕನವಾಡೆ, ಅಜಿತ ಖೇಮಲಾಪುರೆ, ರಾವಸಾಬ ಖಾಂಡೇಕರ, ರಾಜಗೌಡ ಪಾಟೀಲ, ಅರುಣ ಶಿಂಧೆ, ರಾಜು ಖಾಂಡೇಕರ, ಬೈರು ಚೌಗಲೆ, ಅಭಿನಂದನ ಮಗದುಮ್ಮ, ಕೇದಾರಿ ಧೊಂಗರೆ, ಪ್ರಕಾಶ ಜನಾಜ ಪಂಚಾಯತಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕೃಷ್ಣಾ ಐಹೊಳೆ ಸ್ವಾಗತಿಸಿ, ವಂದಿಸಿದರು.
*ವರದಿ:ಡಾ.ಜಯವೀರ ಎ.ಕೆ.*
*ಖೇಮಲಾಪುರ*