ಹಳ್ಳೂರ . ಪಾದಯಾತ್ರೆ ಮೂಲಕ ದೇವರ ನಾಮಸ್ಮರಣೆ ಮಾಡುತ್ತಾ ಸಾಗಿದರೆ ಮನಸ್ಸು ಏಕಾಗ್ರತೆಗೊಂಡು ಮನಸ್ಸಿಗೆ ಶಾಂತಿ ನೆಮ್ಮದಿ ದೊರೆತು ದೇವರ ಪ್ರಿತಿಗೆ ಪಾತ್ರರಾಗುತ್ತೇವೆ ಎಂದು ದಿಂಡಿಯ ಸಂಚಾಲಕರಾದ ಪುಂಡಲಿಕ ಮನ್ನಾಪೂರ ಮಹಾರಾಜರು ಹೇಳಿದರು.
ಅವರು ಉಳವಿಯ ಶ್ರೀ ಚನ್ನಬಸವೇಶ್ವರ ದೇವಸ್ಥಾನದಿಂದ ಪಂಡರಾಪುರದ ವಿಠ್ಠಲ ರುಕ್ಮಿಣಿ ದೇವರ ದರ್ಶನಕ್ಕೆ ಹೊರಟ 14 ನೆ ಆಷಾಡ ದಿಂಡಿಯ ಪಾದಯಾತ್ರೆಯು ಶನಿವಾರದಂದು ಹಳ್ಳೂರ ಗ್ರಾಮದ ದುಂಡಪ್ಪ ಬಡಿಗೇರ ಅವರ ತೋಟದಲ್ಲಿ ದಿಂಡಿ ಮುಕ್ಕಾಮ ಸಮಯದಲ್ಲಿ ಮಾತನಾಡಿ ಸಾದು ಸಂತರ ಸಂಘ ಮಾಡಿ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುರಾಣ ಪ್ರವಚನ ಕೇಳಿ ದೇವರ ದ್ಯಾನವನ್ನು ಮಾಡಿದರೆ ದೇವರೇ ಆ ಮನೆಯಲ್ಲಿ ವಾಸವಿರುತ್ತಾನೆ. ಅಂತವರಿಗೆ ಸಕಲ ಸೌಭಾಗ್ಯಗಳು ದೊರೆಯುತ್ತವೆ. ಈಗಿನ ಯುವಕರು ಮೊಬೈಲ್ ಹೆಚ್ಚಾಗಿ ಬಳಕೆ ಮಾಡಿ ಸತ್ಸಂಗ ಮಹಾತ್ಮರ ಮಾತು ಕೇಳದೆ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಂತ ಮಹಾತ್ಮರ ಮಾತು ಕೇಳಿ ಜೀವನ ಉದ್ದಾರ ಮಾಡಿಕೊಳ್ಳಿರಿ. ದೇವರು ಭಕ್ತಿ ಪ್ರೀಯ ಭಕ್ತಿಗೆ ಮಾತ್ರ ದೇವರು ಮೆಚ್ಚುವನು ಎಂದು ಹೇಳಿದರು.
ಸಂತರು ಭಜನೆ ಕೀರ್ತನೆ ಮಾಡಿದರು. ಹಿರೆನಂದಿ ಸೌಬಾಗ್ಯ ಲಕ್ಷ್ಮೀ ಶುಗರ ಕಾರ್ಖಾನೆ ಡೈರೆಕ್ಟರ್ ಅಧಿಕರಾವ ಪಾಟೀಲ ಅವರಿಗೆ ದುಂಡಪ್ಪ ಬಡಿಗೇರ ಹಾಗೂ ಕುಟುಂಬದವರು ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ನೂರಾರು ಜನ ಸಂತರು ಗ್ರಾಮಸ್ಥರಿದ್ದರು. ಸರ್ವರಿಗೂ ಅನ್ನ ಪ್ರಸಾದ ವ್ಯವಸ್ಥೆ ನಡೆಯಿತು.





