ಹಗರಿಬೊಮ್ಮನಹಳ್ಳಿ ಎಸ್.ಸಿ.ಮೀಸಲು ಕ್ಷೇತ್ರದ ಅಭ್ಯರ್ಥಿ ಬೇಡ ಜಂಗಮ ಸಮುದಾಯದ ಡಾ.ಎ.ಎಮ್.ಎ.ಸುರೇಶ ಪರ ಕೊಟ್ಟೂರು ಪಟ್ಟಣದಲ್ಲಿ ಮನೆ ಮನೆ ಪ್ರಚಾರ ನಡೆಸಲಾಯಿತು.
ವಿವಿಧ ಬಡಾವಣೆಗಳಲ್ಲಿ ಸೋಮವಾರ ಶ್ರೀಮತಿ ಸಂಧ್ಯಾ ಪಾರ್ವತಿ ಮತ್ತು ಬಸಯ್ಯ ಸ್ವಾಮಿ ಶಿವನಗುತ್ತಿ ಅವರುಗಳ ಜೊತೆಗೆ ಸಂಚರಿಸಿದ ಗಂಗಾವತಿ ತಾಲೂಕು ಜಂಗಮ ಸಮಾಜದ ಗೌರವ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಅಭ್ಯರ್ಥಿ ಡಾ.ಸುರೇಶ ಕುಮಾರ ಅವರ ಪರ ಪ್ರಚಾರ ನಡೆಸಿದರು.
ಪಕ್ಷೇತರ ಅಭ್ಯರ್ಥಿ ಡಾ.ಸುರೇಶ್ ಪರ ಒಲವು ವ್ಯಕ್ತವಾಗುತ್ತಿದೆ ಎಂದು ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.





