ಹಳ್ಳೂರ ಶ್ರಾವಣ ಮಾಸದಲ್ಲಿ ಸತ್ಸಂಗದಲ್ಲಿ ಪಾಲ್ಗೊಂಡು ಸಾದು ಸಂತರ ಹೇಳುವ ಹೀತೋಪದೆಶಗಳನ್ನು ಕೇಳಿದರೆ ಪಾಪ ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ.
ಹಾಗೂ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದು ಶಿವಾನಂದ ಸ್ವಾಮೀಜಿಯವರು ಹೇಳಿದರು. ಅವರು ಗ್ರಾಮದ ಸಿದ್ದಾರೂಢ ಮಠದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕ್ಕೊಂಡ ಪ್ರವಚನ ಕಾರ್ಯಕ್ರಮಲ್ಲಿ ಮಾತನಾಡಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಜೊತೆ ಸಂಸ್ಕಾರ ಕಲಿಸಿದರೆ ಮಾತ್ರ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಶ್ರಾವಣ ಮಾಸ ಮುಗಿಯವರೆಗು ಪ್ರವಚನ ಕಾರ್ಯಕ್ರಮ ಸಂಜೆ ಇರುತ್ತದೆ ಮನೆ ಕೆಲಸ ಬೇಗನೆ ಮಾಡಿಕೊಂಡು ಸತ್ಸಂಗದಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.
ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿದ ಮಹನೀಯರಿಗೆ ಪೂಜ್ಯರು ಸನ್ಮಾನಿಸಿ ಗೌರವಿಸಿದರು. ಸರ್ವರಿಗೂ ಅನ್ನ ಪ್ರಸಾದ ವ್ಯವಸ್ಥೆ ನಡೆಯಿತು. ಗ್ರಾಮದ ಗುರು ಹಿರಿಯರಿದ್ದರು.





