ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಮೂಲಕ ಗಣಿಧಣಿ ಜನಾರ್ದನ ರೆಡ್ಡಿ, ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಇಂದು ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ರಾಯಚೂರು: ಹೊಸ ಪಕ್ಷ ಕಟ್ಟಿದ ಬಳಿಕ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Janardhana Reddy ), ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬಿಡುವು ಇಲ್ಲದೆ ಪ್ರಚಾರ ಕಾರ್ಯ ಶುರುಮಾಡಿದ್ದಾರೆ..ಇಂದು ರಾಯಚೂರಿನಲ್ಲಿ ಪತ್ನಿ ಜೊತೆಗೆ ಮೊದಲ ಬಾರಿಗೆ ಪಾದಯಾತ್ರೆ ನಡೆಸಿ ಹಲ್ ಚಲ್ ಸೃಷಿಸಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಯಲ್ಲಿ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ವರ್ಷ ರೈತನ ಅಕೌಂಟ್ಗೆ 15 ಸಾವಿರ ರೂ. ಹಣ ಜಮಾ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದು, ರೈತರ ಮನೆ ಬಾಗಿಲಿಗೆ ಅಧಿಕಾರಿಗಳು ಆಗಮಿಸಿ ಸಮಸ್ಯೆ ಆಲಿಸುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ.
ಇನ್ನು ಈ ಬಗ್ಗೆ ಅಂಬಾಮಠದಲ್ಲಿ ಮಾತನಾಡಿದ ರೆಡ್ಡಿ, ತಮ್ಮ ಪಕ್ಷದ ಪ್ರಣಾಳಿಕೆಗಳಲ್ಲಿರುವ ಕೆಲ ಅಂಶಗಳನ್ನು ತಿಳಿಸಿದರು. ಕೆಆರ್ಪಿಪಿ ಅಧಿಕಾರಕ್ಕೆ ಬಂದರೇ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು. ಪ್ರತಿ ವರ್ಷ ರೈತರ ಖಾತೆಗೆ 15 ಸಾವಿರ ಹಣ ಜಮೆ ಮಾಡುತ್ತೇವೆ. ಮನೆ ಬಾಗಿಲಿಗೆ ಅಧಿಕಾರಿಗಳು ಹೋಗಿ ಸಮಸ್ಯೆ ಆಲಿಸಲು ಕ್ರಮ. ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಪ್ರತಿ ವರ್ಷ ಪ್ರತಿ ರೈತನ ಅಕೌಂಟ್ ಗೆ 15 ಸಾವಿರ ಹಣ ಜಮೆ. ರೈತರ ಮನೆ ಬಾಗಿಲಿಗೆ ಅಧಿಕಾರಿಗಳು ಹೋಗಿ ಸಮಸ್ಯೆ ಆಲಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೇ ನೀರಾವರಿ ಯೋಜನೆ ಸದೃಢಗೊಳಿಸಲಾಗುತ್ತೆ.