ಸುಕ್ಷೇತ್ರ ಮುಗಳಖೋಡದಲ್ಲಿ ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ 138 ನೇ ಜಯಂತಿ ಆಚರಣೆ
ವರದಿ: ಸಂತೋಷ ಮುಗಳಿ
ಮುಗಳಖೋಡ: ಪಟ್ಟಣದ ಅರಾದ್ಯ ದೈವ ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ 138 ನೇ ವರ್ಷದ ಜಯಂತ್ಯೋತ್ಸವ ವಿಜೃಂಭಣೆಯಿಂದ ಶ್ರೀಮಠದಲ್ಲಿ ಆಚರಿಸಲಾಯಿತು.
ಪರಮ ಪೂಜ್ಯ ಡಾ. ಶ್ರೀಗಳು ಶ್ರೀ ಯಲ್ಲಾಲಿಂಗೇಶ್ವರರ ಕತೃ ಗದ್ದುಗೆಗೆ ಮಹಾ ರುದ್ರಾಭಿಷೇಕ ಮಾಡಿದರು. ನಂತರ ವೇದಿಕೆ ಮೇಲೆ ಶ್ರೀ ಯಲ್ಲಾಲಿಂಗೇಶ್ವರರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ಕೇಕ ಕತ್ತರಿಸಿ ಭಕ್ತರಿಗೆ ಸಿಹಿ ಹಂಚಿದರು.

ಪರಮ ಪೂಜ್ಯ ಡಾ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಭಕ್ತರನ್ನುದ್ದೆಶಿಸಿ ಮಾನವ ಮಾಡೀದ ಪಾಪ ಕರ್ಮಗಳು ಭೂಮಿಯ ಮೇಲೆ ಅತಿಯಾದಾಗ ಪ್ರಕೃತಿ ಮುನಿಸಿಕೊಂಡು ಬರಗಾಲದ ಛಾಯೆ ಮೂಡಿದೆ ಆದರೆ ರೈತನ ಮುಖ ಹಾಗೂ ಅವನ ಸಂಕಟವನ್ನು ನೋಡಿ ಈ ವರ್ಷ ಮಳೆ ಆಗಿ ಸಮೃದ್ದಿ ಬೇಳೆ ಬರುತ್ತದೆ ಯಾರು ಹೇದರುವ ಅವಶ್ಯಕತೆ ಇಲ್ಲ ಎಂದು ಆಶಿರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಬೆಳಗಲಿಯ ಶ್ರೀ ಸಿದ್ದರಾಮ ಶಿವಯೋಗಿಗಳು ತಮ್ಮ ನುಡೀಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾರುತಿ ಗೋಕಾಕ, ಅಪ್ಪಣಗೌಡ ಪಾಟೀಲ, ರಾಯಗೌಡ ಖೇತಗೌಡರ, ಡಾ.ಮುತ್ತಪ್ಪ ಕೊಪ್ಪದ, ಹಣುಮಾಸಾಬ ನಾಯಿಕ, ಮಹಾದೆವ ಬುಲಬುಲೆ, ಹಾಗೂ ಪುರಸಭೆ ಸದಸ್ಯರು ಮಹಾಂತೇಶ ಯರಡತ್ತಿ, ರಾಜು ನಾಯಿಕ ಹಾಗೂ ಶ್ರೀ ಸಿದ್ದಶ್ರೀ ಶಾಲಾ ಮಕ್ಕಳು ಹಾಗೂ ಸಿಬ್ಬಂದಿಯವರು ಮತ್ತು ಪಟ್ಟಣದ ಗುರು ಹಿರಿಯರು ಭಾಗಿಯಾಗಿದ್ದರು.





