ಬೆಳಗಾವಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಕುರಿಗಾರ ಮಲ್ಲಪ್ಪ ಹಿರೆಕೋಡಿ ಇವರ ಕುರಿಯ ದಡ್ಡಿ ಮೇಲೆ ತೋಳಗಳು ದಾಳಿ ಮಾಡಿ ಸುಮಾರು 18 ಕುರಿಗಳು ಮೃತಪಟ್ಟಿದ್ದು ಇನ್ನೂ 10 ಕುರಿಗಳು ಎಳೆದುಕೊಂಡು ಹೋಗಿ ತಿಂದು ಹಾಕಿದ್ದಾವೆ ಎನ್ನಲಾಗಿದೆ
ಸ್ಥಳಕ್ಕೆ ಅರಣ್ಯ ವಲಯ ಅಧಿಕಾರಿಗಳು ಮತ್ತು ಪಶು ಇಲಾಖೆ ಅಧಿಕಾರಿಗಳು ರಾಯಬಾಗ್ ಪೊಲೀಸ್ ಠಾಣೆ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ
ಅರಣ್ಯ ವಲಯ ಅಧಿಕಾರಿಗಳು ಪೋಸ್ಟ್ ಮಾರ್ಟಂ FIR ಕಾಪಿ ಬಂದಮೇಲೆ ಸೂಕ್ತ ಪರಿಹಾರ ನೀಡುವುದಾಗಿ ಹೇಳಿದ್ದಾರೆ
ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದ ಸಾಮಾಜಿಕ ಹೋರಾಟಗಾರ ಜ್ಯೋತಿಬಾ ಮಾನೆ ಅವರು ಕುರಿಗಾರರ ಬಹುದೊಡ್ಡ ಕಸುಬು ಇದಾಗಿದ್ದು ಸರ್ಕಾರ ಕುರಿಗಳ ಮೇಲೆ ಇಂತಹ ಅನಾಹುತಗಳ ಆಗುವದರಿಂದ ಪರಿಹಾರ ಧನ ಸಹಾಯವನ್ನು ಹೆಚ್ಚು ಮಾಡಬೇಕು ಈಗಿರೋ ಪರಿಹಾರ ಧನ ಸಹಾಯ ಸಾಕಾಗೋಲ್ಲ
ಅವರ ಸೂಕ್ತ ಜೀವನಕ್ಕೆ ಅದೊಂದೇ ಕೂಸುಬು ಇರೋದರಿಂದ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು ಎಂದು ಹೇಳಿದರು