ಬೆಳಗಾವಿ. ರಾಯಬಾಗ
ನಾಳೆ ಬಿಜೆಪಿ ಪಕ್ಷದಿಂದ ಮಹಿಳಾ ಸಮಾವೇಶ ಹಾಗೂ ಸಂಸ್ಕೃತಿಕ ಉತ್ಸವ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಎಚ್ ವಿ ಎಚ್ ಮೈದಾನದಲ್ಲಿ ಕುಡಚಿ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಿ ರಾಜೀವ್ ಅವರಿಂದ ಜಿಲ್ಲಾ ಮಹಿಳಾ ಸಮಾವೇಶ ಹಾಗೂ ಸಂಸ್ಕೃತಿಕ ಸಮಾರಂಭ ಜರುಗಲಿದೆ. ಈ ಸಮಾರಂಭಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಅನೇಕ ರಾಜಕೀಯ ಮುತ್ಸದ್ದಿಗಳು ಲೇಖಕರು ಭಾಗವಹಿಸಲಿದ್ದು,ಕುಡಚಿ ರಾಜಕೀಯ ಇತಿಹಾಸದಲ್ಲಿಯೇ ಅತಿ ದೊಡ್ಡ ಮಹಿಳಾ ಸಮಾವೇಶ ಇದಾಗಲಿದೆ ಎಂದು ಆಪ್ತರು ತಿಳಿಸಿದ್ದಾರೆ.