ಮಹಿಳಾ ಸಬಲೀಕರಣಕ್ಕೆ ಜ್ಞಾನವಿಕಾಸ ಸಹಕಾರಿ: ವಿದ್ಯಾವತಿ ಭಜಂತ್ರಿ
ಬೆಳಗಾವಿ: ಜ್ಞಾನವಿಕಾಸ ಕಾರ್ಯಕ್ರಮದಿಂದ ಮಹಿಳೆಯರು ಸಬಲೀಕರಣ ಆಗುತ್ತಿರುವುದು ಸಂತೋಷ ತಂದಿದೆ. ಮನೆಯೊಳಗಿದ್ದ ಮಹಿಳೆಯರು ಸಮಾಜದಲ್ಲಿ ಸ್ವಾವಲಂಬಿಯಾಗಿ ಜೀವಿಸಲು, ಧೈರ್ಯದಿಂದ ಮಾತನಾಡಲು ಸಹಾಯವಾಗಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಹೇಳಿದರು.
ತಾಲೂಕಿನ ಮಚ್ಛೆ ಗ್ರಾಮದ ಸಪ್ತಪದಿ ಮಂಗಳ ಕಾರ್ಯಾಲಯದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕ ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು,
ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಸ್ವ-ಉದ್ಯೋಗ ಮೂಲಕ ಹಣ ಸಂಪಾದನೆ ಮಾಡಿ, ಬೆಳೆದು ಕುಟುಂಬಕ್ಕೆ ಕಣ್ಣಾಗಿ ನಿಲ್ಲುತ್ತಿದ್ದಾರೆ. ಯೋಜನೆಯ ಕಾರ್ಯಕ್ರಮಗಳು ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿದ್ದು ಪೂಜ್ಯರ ಕಾರ್ಯಕ್ರಮಗಳು ಅತ್ಯುತ್ತಮ ವಾಗಿವೆ ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ ನವಚೇತನ ಕಾರ್ಯಕ್ರಮದ ಫಲಾನುಭವಿಯವರಿಗೆ ಸೌಲಭ್ಯಗಳ ವಿತರಣೆ ಮಾಡಲಾಯಿತು ಸದಸ್ಯ ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಧಾರವಾಡ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ ಮಾತನಾಡಿ, ಯೋಜನೆಯ ಕಾರ್ಯಕ್ರಗಳು ಹಾಗೂ ಜ್ಞಾನ ವಿಕಾಸ ಕಾರ್ಯಕ್ರಮದ ವೈಶಿಷ್ಟ್ಯ ಗಳ ಬಗ್ಗೆ ಸಮಗ್ರ ಮಾಹಿತಿ ತಿಳಿಸಿದರು.
ಈ ಸಂದರ್ಭದಲ್ಲಿ ಶೋಭಾ ಸೋಮನಾಚೆ, ಪಿಎಸ್‌ಐ ಶ್ವೇತಾ ಆರ್. ಎನ್ , ಶಿಕ್ಷಕಿ ಸುನೀತಾದೇವಿ ಕಸಗುಂಡಿ, ಡಾ. ವಿದ್ಯಾ ಪಾಟೀಲ, ಜಯಶ್ರೀ, ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ , ಜ್ಯೋತಿ ಜೋಳದ, ಜ್ಞಾನವಿಕಾಸ ಕಾರ್ಯಕ್ರಮ ದ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಮಲ್ಲಿಕಾ ಹಾಗೂ ಇತರರು ಇದ್ದರು.