8ನೇ ತ್ರೀಪಕ್ಷಿಯ ವೇತನ ಪಡೆಯಲು ಕಾರ್ಮಿಕರು ಅ,18 ರಂದು ಬೆಂಗಳೂರ ಚಲೋ

Share the Post Now

ಹಳ್ಳೂರ

ಗೋದಾವರಿ ಬೈಯೋರಿಪೈನರಿಸ್ ಲಿಮಿಮಿಟೆಡ್ ಸಮೀರವಾಡಿ ಮಜದೂರ ಯೂನಿಯನ್ ಕಚೇರಿ ಆವರಣದಲ್ಲಿ ಸೋಮವಾರ ಸಾಯಂಕಾಲ  ಸಾಮನ್ಯ ಸಭೆ ನಡೆಯಿತು.       

                                               ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಮಹತ್ವದ ಬೇಡಿಕೆಗಳಲ್ಲಿ ಒಂದಾದ 8 ನೇ ತ್ರಿಪಕ್ಷಿ ವೇತನ ಪಡೆಯಲು ಕಾರ್ಮಿಕರೆಲ್ಲ ಒಗ್ಗಟ್ಟಾಗಿ ಹೋರಾಟ ನಡೆಸಲು ನಿರ್ಧರಿಸಿ ನಮ್ಮ ಬೇಡಿಕೆ ಈಡೇರಿಸುಕೊಳ್ಳುವ ಸಲುವಾಗಿ ಕರ್ನಾಟಕ ರಾಜ್ಯ ಸಕ್ಕರೆ ಮಹಾ ಮಂಡಳ ಇವರ ನೇತೃತ್ವದಲ್ಲಿ ಕಾರ್ಮಿಕರ ನಿಯೋಗವು ಆಗಸ್ಟ್ 18 ರಂದು ಬೆಂಗಳೂರ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು  ನಿರ್ಧರಿಸಲಾಗಿದೆ. ಸಾಮಾನ್ಯ ಸಭೆಯಲ್ಲಿ ಎಲ್ಲ ಕಾರ್ಮಿಕರೆಲ್ಲ ನಾವೆಲ್ಲರೂ ಏನೇ ಬಂದರೂ ಒಗ್ಗಟ್ಟಾಗಿ 8 ನೇ  ತ್ರಿಪಕ್ಷೀಯ ವೇತನ ಪಡೆಯಲು ಹೋರಾಟಕ್ಕೆ ಸಣ್ಣದ್ದರಾಗಿದ್ದೇವೆ  ಹೋರಾಟಕ್ಕೆ ನಾವೂ ಬೆಂಬಲ ನೀಡುತ್ತೇವೆ ಎಂದು ಹೇಳಿದರು.     

                                      ಸಾಮಾನ್ಯ ಸಭೆಯಲ್ಲಿ ಕಾರ್ಮಿಕರ ವಿವಿಧ ಬೇಡಿಕೆಗಳ ಹಾಗೂ ಅನೇಕ ವಿಷಯಗಳ ಕುರಿತು ಚರ್ಚೆ ನಡೆಯಿತು.               

  ಕರ್ನಾಟಕ ರಾಜ್ಯದಲ್ಲಿ 79 ಸಕ್ಕರೆ ಕಾರ್ಖಾನೆಗಳಿವೆ ಸುಮಾರು 80 ಸಾವಿರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ 1990 ರಿಂದ ಒಟ್ಟು 7 ವೇತನ ಜಾರಿಯಲ್ಲಿವೆ ಮಹಾರಾಷ್ಟ್ರದಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು 8ನೇ ವೇತನ ನೀಡುತ್ತಿದ್ದು. ಕರ್ನಾಟಕ ರಾಜ್ಯದಲ್ಲಿ 8ನೇ ವೇತನ ನೀಡುವ ಆದೇಶವನ್ನು ಕೂಡಲೇ ಜಾರಿಗೊಳಿಸಬೇಕೆಂದು ಕಾರ್ಮಿಕರ ಬೇಡಿಕೆಯಾಗಿದೆ.


ಈ ಸಮಯದಲ್ಲಿ ಮಜದೂರ ಯುನಿಯನ್ ಕಾರ್ಯಾಧ್ಯಕ್ಷ ಬಿ ವಿ ಮೇಲಪ್ಪಗೋಳ.ಉಪಾಧ್ಯಕ್ಷ ಕೆ ಬಿ ವಾಜೆಂತ್ರಿ. ಪ್ರಧಾನ ಕಾರ್ಯದರ್ಶಿ ಎನ್ ಪಿ ಮಾಳಿ.ಕಾರ್ಯದರ್ಶಿ ಎಸ್ ಬಿ ಪಾಟೀಲ. ಸಹ ಕಾರ್ಯದರ್ಶಿ ಸಿ ಎಂ ಅಥಣಿ.ಕೋಶಾಧಿಕಾರಿ ವಿ ಎಸ್ ಕಮತೆ ಸೇರಿದಂತೆ ಮಜದೂರ ಯೂನಿಯನ್ ಸರ್ವ ಸದಸ್ಯರು ಹಾಗೂ ಕಾರ್ಮಿಕರಿದ್ದರು.

Leave a Comment

Your email address will not be published. Required fields are marked *

error: Content is protected !!