ವಿಶ್ವ ಕಂಡ ಶ್ರೇಷ್ಠ ಸಾಮಾಜಿಕ ಚಿಂತಕ

Share the Post Now

ಬೆಳಗಾವಿ


ಪೋವೆಲ್ ರ ತತ್ವ ಆದರ್ಶ ಗುಣಗಳನ್ನು  ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ,


ವರದಿ: ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ

ಮುಗಳಖೋಡ :  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ರಾಯಭಾಗ ಹಾಗೂ ಹಂದಿಗುಂದದ ಅರುಣೋದಯ  ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಾಂತಿವೀರ  ಸಂಗೊಳ್ಳಿ ರಾಯಣ್ಣ  ಟ್ರೂಫ್ ಅವರ ಸಂಯುಕ್ತ ಆಶ್ರಯದಲ್ಲಿ ಲಾರ್ಡ್ ಬೆಡನ್ ಪೊವೆಲ್ ಹಾಗೂ ಲೇಡಿ ಬೆಡನ್ ಪೊವೆಲ ರವರ ಜನ್ಮದಿನದ ಪ್ರಯುಕ್ತ ವಿಶ್ವ ಬೃಾತೃತ್ವ ದಿನದ ಸಮಾರಂಭ  ಅದ್ದೂರಿಯಾಗಿ ಬುಧವಾರ ನಡೆಯಿತು .  ಲಾರ್ಡ್ ಬೆಡನ್ ಪೊವೆಲ  ಹಾಗೂ ಲೇಡಿ ಬೆಡನ್ ಪೊವೆಲ ರವರ  ಭಾವಚಿತ್ರಕ್ಕೆ  ಹಂದಿಗುಂದ ಮಾಜಿ ಗ್ರಾಪಂ  ಉಪಾಧ್ಯಕ್ಷ ಶಿವಪ್ಪ ಹೊಸೂರು ಹಾಗೂ ಮುರಿಗೆಪ್ಪ ಅಂದಾನಿ ವಿಶೇಷ ಪೂಜೆ ಸಲ್ಲಿಸಿದರು.   ನಂತರ ಸ್ಕೌಟ್ಸ್ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. 

ಶಿಕ್ಷಕ ಯಲ್ಲಪ್ಪ ಜಕನೂರ ಮಾತನಾಡಿ ,  ಲಾರ್ಡ್ ಬೆಡನ್ ಪೋವೆಲ್ ಹಾಗೂ ಲೇಡಿ ಬೆಡನ್ ಪೋವೆಲ್  ಅವರು ವಿಶ್ವದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯನ್ನು ಹುಟ್ಟು ಹಾಕಿ   ಸಾಮಾಜಿಕ ಕಳಕಳಿಯನ್ನು  ವಿದ್ಯಾರ್ಥಿಗಳಲ್ಲಿ ಬಿತ್ತಿದ್ದಾರೆ.   ಅವರು ವಿಶ್ವ ಕಂಡ ಶ್ರೇಷ್ಠ ಸಾಮಾಜಿಕ ಕಳಕಳಿಯುಳ್ಳ ಚಿಂತಕ . ಭಾರತ್ ಸ್ಕೌಟ್ಸ್ ಮತ್ತು  ಗೈಡ್ಸ್ ಚಳುವಳಿಯು ನಮ್ಮ ದೇಶದಲ್ಲಿ ಬೆಳೆದು ಬಂದ ಬಗೆ   ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಯುವ ಹಾಗೆ ಹೇಳುತ್ತಾ  ಪೋವೆಲ ರವರ ತತ್ವ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆoದರು  .  ನಂತರ   ಸ್ಕೌಟ್ಸ್ ವಿದ್ಯಾರ್ಥಿಗಳಿಂದ ಘೋಷಣೆ ಕೂಗುತ್ತಾ  ಸೈಕಲ್  ಜಾಥಾ  ಅರುಣೋದಯ ಶಾಲೆಯಿಂದ ಶ್ರೀ ಸಿದ್ದೇಶ್ವರ ದೇವಸ್ಥಾನ ಬಸ್ ನಿಲ್ದಾಣ ಜನತಾ ಪ್ಲಾಟ್ ಕಾಲೋನಿಗಳಲ್ಲಿ ಸಂಚರಿಸಿತು.  ಮಧ್ಯಾನ ವಿದ್ಯಾರ್ಥಿಗಳಿಗೆ ಚಿತ್ರಕಲೆ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಈ ಸಂದರ್ಭದಲ್ಲಿ    ಮಹಾಲಕ್ಷ್ಮಿ ಬ್ಯಾಂಕಿನ ನಿರ್ದೇಶಕ ಮುರಿಗೆಪ್ಪ ಅಂದಾನಿ , ಗ್ರಾಪo ಮಾಜಿ ಉಪಾಧ್ಯಕ್ಷ  ಶಿವಪ್ಪ ಹೊಸೂರ,  ಕುಡಚಿ ಮಂಡಳದ ಬಿಜೆಪಿ ಘಟಕದ ಖಜಾಂಚಿ ಶಿವಲಿಂಗ ಬಾಗೇವಾಡಿ,  ಯುವ ಮುಖಂಡ ರುದ್ರಪ್ಪ ಭದ್ರಶೆಟ್ಟಿ,  ಪ್ರಧಾನಗುರು ನಾರಾಯಣ ಜಾದವ , ಹಿರಿಯ ಶಿಕ್ಷಕ ರಾಮಕೃಷ್ಣ ಬನಾಜ, ದೈಹಿಕ ಶಿಕ್ಷಕ ಹಾಗೂ ಸ್ಕೌಟ್ ಮಾಸ್ಟರ್ ಸಿ.ಎಸ್. ಹಿರೇಮಠ, ಶಾಂತಕುಮಾರ ಬೆಳ್ಳಿಕಟ್ಟಿ ,  ಕಾವೇರಿ ಯತ್ತಿನಮನಿ, ಶ್ರೀಮತಿ ಎಲ್ ಎಂ ಕಾಳೆ,  ಭಾಗ್ಯಶ್ರೀ ಸಪ್ಪಡ್ಲ,  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಇದ್ದರು

Leave a Comment

Your email address will not be published. Required fields are marked *

error: Content is protected !!