ಹಾರೂಗೇರಿ ಕಾಂಗ್ರೆಸ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ
ಬೆಳಗಾವಿ:ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಯಲ್ಲಪ್ಪ ಶಿಂಗೆ ಅವರು ಕುಡಚಿ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು ಆದರೆ ಪಕ್ಷದ ಹೈ ಕಮಾಂಡ್ ಶ್ರೀ ಮಹೇಂದ್ರ ತಮ್ಮಣ್ಣವರ ಅವರಿಗೆ ಟಿಕೆಟ್ ಘೋಷಣೆ ಮಾಡಿದರಿಂದ ಪಕ್ಷದ ಮೇಲೆ ಮುನಿಸಿಕೊಂಡು ಯಲ್ಲಪ್ಪ ಅವರು ಬಂಡಾಯ ಕಾಂಗ್ರೇಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು ಈಗ ಪಕ್ಷದ ನಾಯಕರು ಮನವಲಿಸಿದರಿಂದ ಕುಡಚಿ ಮತಕ್ಷೇತ್ರದ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವುದಾಗಿ ಹೇಳಿದರು

ಯಲ್ಲಪಾ ಶಿಂಗೆ ಮಾತನಾಡಿ ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತಿದ್ದೆ ನಾನು ಕೂಡಾ ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ ಆದರೆ ಪಕ್ಷ ನನಗೆ ಟಿಕೆಟ್ ನೀಡದೆ ಇದ್ದರಿಂದ ಬೇಸರದಿಂದ ಬಂಡಾಯ ಕಾಂಗ್ರೇಸ್ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೆ ರಾಜ್ಯ ಮತ್ತು ಜಿಲ್ಲಾ ನಾಯಕರು ಸೂಚನೆ ಮೇರೆಗೆ ಕಾಂಗ್ರೆಸ್ ಅಭ್ಯರ್ಥಿ ಗೆ ಬೆಂಬಲ ನೀಡಲು ನಿರ್ದಿಸಿದ್ದೇನೆ ಏಕೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನಾನು ಪಕ್ಷದ ಪರವಾಗಿ ಕುಡಚಿ ಮತಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ ಹಾಗೂ ನನ್ನ ಬೆಂಬಲಿಗರು ಯಾರು ಸಹಿತ ನಾನು ಸ್ಪರ್ಧೆ ಮಾಡಿರುವ ಚಿಹ್ನೆಗೆ ಯಾರು ಮತವನ್ನು ಹಾಕಬೇಡಿ,ದಯಮಾಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು
ನಂತರ ಅಧಿಕೃತ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ ಮಾತನಾಡಿ ಸ್ಥಳೀಯ ವಾಗಿ ನಾವು ನಾಲ್ಕು ಜನ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿದ್ದೆವು ಆದರೆ ಪಕ್ಷ ನನಗೆ ಟಿಕೆಟ್ ಘೋಷಣೆ ಮಾಡಿದೆ ಟಿಕೆಟ್ ತಪ್ಪಿದವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕುಡಚಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ಎಲ್ಲರೂ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿ ಎಐಸಿಸಿ ವಿಕಕ್ಷಕರಾದ ಮೋಹನ ಜೋಶಿ, ಚಿಕ್ಕೋಡಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯಲ್ಲಪ್ಪಾ ಶಿಂಗೆ, ದಸ್ತಗೀರ ಕಾಗವಾಡೆ,ತಾರೀಖ ಬಾಗವಾನ, ರವಿಶಂಕರ ನರಗಟ್ಟಿ,ರಾಮಣ್ಣಾ ಗಸ್ತಿ,ಡಿ ಎಸ್ ನಾಯಿಕ, ಎನ್ ಎಸ್ ಚೌಗಲಾ ಬಾಳೆಶ್ ಹಾಡಕರ ಚಿದಾನಂದ್ ಮೂಡಸಿ ವರ್ಧಮಾನ ಶಿರಹಟ್ಟಿ ಶ್ರೀಶೈಲ್ ಮೂಡಸಿ ಅಪ್ಪಸಾಬ್ ಸರಿಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





