ಬೆಳಗಾವಿ. ರಾಯಬಾಗ
ಬೆಳಗಾವಿ :ಜಿಲ್ಲೆಯ ತಾಲೂಕಿನ ಕುಡಚಿ ಮತಕ್ಷೇತ್ರದ ಮಹೇಂದ್ರ ತಮ್ಮಣ್ಣವರ ಅವರ ಸೇವಾ ಮನೋಭಾವ ಕಂಡು ಮತ್ತು ಕೈಯಲ್ಲಿ ಅಧಿಕಾರ ಇಲ್ಲದಿದ್ದರೂ ಪ್ರವಾಹ ಹಾಗೂ ಕೊರೋನಾದಂತಹ ಸಂಕಷ್ಟದ ಸಮಯದಲ್ಲಿ ಜನರಿಗೆ ಆಸರೆಯಾಗಿ ಕಣ್ಣೀರು ಒರೆಸಿದ ಯುವ ನಾಯಕ ಕುಡಚಿ ಮತಕ್ಷೇತ್ರದ ಆಶಾಕಿರಣ ಮಹೇಂದ್ರ ತಮ್ಮಣ್ಣವರ ಸಮ್ಮುಖದಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ಐನಾಪೂರೆ ತೋಟ, ಸವದಿ ತೋಟ, ಜಂಬಗಿ ತೋಟ,ವಾಣಿ ತೋಟ, ಕೋಳಿ ತೋಟ,ಒಡೆಯರ ತೋಟ, ಬ್ಯಾಕುಡೆ ತೋಟ ಕತ್ತಿ ತೋಟ, ಗಲಗಲಿ ತೋಟ,ತುಕಾನಿ ತೋಟ ಹಾಗೂ ಸಸಾಲಟ್ಟಿ ತೋಟದಲ್ಲಿ ನೂರಾರೂ ಬಿಜೆಪಿ ಕಾರ್ಯಕರ್ತರು ಮಹೇಂದ್ರ ತಮ್ಮಣ್ಣವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಒಂದು ಭ್ರಷ್ಟಾಚಾರದ ಆರೋಪವಿಲ್ಲದೆ ಐದು ವರ್ಷಗಳ ಕಾಲ ಎಲ್ಲ ಸಮಾಜಗಳನ್ನು ಸಮನಾಗಿ ತೆಗೆದುಕೊಂಡು ಕೆಳಮಟ್ಟದ ಜನರ ಕ್ಷೇಮಾಭಿವೃದ್ಧಿ ಕನಸುಕಂಡ ಜನನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಅವರಿಗೆ ಶಕ್ತಿ ತುಂಬಬೇಕು ಹಾಗೂ ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿ ನಾವೆಲ್ಲರೂ ಸೇರಿ ಬರುವಂತಹ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೀವು ಆಶೀರ್ವಾದ ಮಾಡಬೇಕೆಂದು ಮಹೇಂದ್ರ ತಮ್ಮಣ್ಣವರ ಅವರು ಹೇಳಿದರು
ನಂತರ ಭಾರತ ರತ್ನ, ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮದಿನದ ಅಂಗವಾಗಿ ಗ್ರಾಮದಲ್ಲಿರುವ ಅವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ, ಗೌರವ ಸಲ್ಲಿಸಿದರು.
ಈ ಸಮಯದಲ್ಲಿ ಯಲ್ಪಾರಟ್ಟಿ ಗ್ರಾಮದ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಹಾಗೂ ಮಹೇಶ ತಮ್ಮಣ್ಣವರ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.