ಬೆಳಗಾವಿ :ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ 110ಕೆವಿ ಉಪ ಕೇಂದ್ರದಲ್ಲಿ ಗುರುವಾರ ದಿನಾಂಕ 17ರಂದು ಪರಿವರ್ತಕ ಹಾಗೂ ಉಪಕರಣಗಳ ತ್ರೈಮಾಸಿಕ ನಿರ್ವಹಣೆ ಕೆಲಸವನ್ನು ಕೈಗೊಳ್ಳಲಿರುವ ಕಾರಣ ಉಪ ಕೇಂದ್ರದ 110ಕೆವಿ ವಿದ್ಯುತ್ ಮಾರ್ಗಗಳಲ್ಲಿ ಮುಂಜಾನೆ 10ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಯಲ್ಪಾರಟ್ಟಿ 110ಕೆವಿ ಎಸ್.ಓ. ಸೋಮಶೇಖರ ಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.