ಬೆಳಗಾವಿ, ರಾಯಬಾಗ
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಕ್ಷೇತ್ರ ಯಲ್ಪಾರಟ್ಟಿಯ ಶ್ರೀ ಅರಣ್ಯಸಿದ್ಧೇಶ್ವರದೇವರ ಜಾತ್ರಾ ಮಹೋತ್ಸವವು ಮುಂದಿನ ತಿಂಗಳು ಪೆಬ್ರುವರಿ 23-2-2023 ರಿಂದ 27-2-2023ರ ವರೆಗೆ ಜರುಗಲಿದೆ ಎಂದು ಶ್ರೀ ಅರಣ್ಯಸಿದ್ದೇಶ್ವರ ದೇವಸ್ಥಾನದ ಕಮಿಟಿಯವರು ಜಾಹಿರಾತು ಬಿಡುಗಡೆ ಮಾಡಿ ತಿಳಿಸಿದ್ದಾರೆ
ಗುರುವಾರ ದಿನಾಂಕ 23-2-2023 ರಂದು “ಕರಿ ಕಟ್ಟುವುದು “ಹಾಗೂ ಜಾತ್ರಾ ಮಹೋತ್ಸವ ಪ್ರಾರಂಭವಾಗುತ್ತದೆ
ರವಿವಾರ ದಿನಾಂಕ 26-2-2023 ರಂದು “ನೈವೇದ್ಯ “ಹಾಗೂ ಸೋಮವಾರ ದಿನಾಂಕ 27-2-2023ರಂದು “ನೀವಾಳಿಕೆ ಇರುತ್ತದೆ
ಉತ್ತರ ಕರ್ನಾಟಕದ ಶಕ್ತಿ ಕೇಂದ್ರಗಳ್ಳಲಿ ಒಂದಾದ ಯಲ್ಪಾರಟ್ಟಿ ಯ ಬಂಡಾರದ ವಡೆಯ ಶ್ರೀ ಅರಣ್ಯ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ವಿವಿಧ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಂದ ಬರುವ ಭಕ್ತರಿಗೆ ದೇವಸ್ಥಾನ ದ ಕಮಿಟಿಯವರು ಕೆಲವು ಸೂಚನೆಗಳನ್ನು ನೀಡಿದ್ದಾರೆ ಮಾಸ್ಕ್ ಇಲ್ಲದೆ ದೇವಸ್ಥಾನದ ಆವರಣದ್ದಲಿ ಪ್ರವೇಶ ನಿಷೇದ, ಶಾನಿಟೈಜರ್ ಬಳಸಬೇಕು, ಜಾತ್ರೆಯಲ್ಲಿ ಅರಿಸಿನದಿಂದ ತಯಾರಿಸಿದ ಬಂಡಾರವನ್ನು ಮಾತ್ರ ಉಪಯೋಗಿಸಬೇಕು ಮತ್ತು ಸ್ವಚ್ಛತೆ ಕಾಪಾಡಬೇಕೆಂದು ತಿಳಿಸಿದ್ದಾರೆ
ಕುದರೆ ಶರ್ಯತ್ತು
ದಿನಾಂಕ 28-2-2023 ರಂದು ಕುದರೆ ಶರ್ಯತ್ತು ಇರುತ್ತದೆ ಪ್ರಥಮ ಬಹುಮಾನ =7001
ದ್ವಿತೀಯ =5001
ತೃತೀಯ = 3001
ಚತುರ್ಥ=2001 ಈ ರೀತಿ ಬಹುಮಾನವಿದ್ದು ಮುಂಚಿತವಾಗಿ
501 ಪ್ರವೇಶ ಪಿ ತುಂಬಿ ರಸೀದಿಯನ್ನು ಪಡೆದಿರಬೇಕು
ಮತ್ತುಈ ಸಂದರ್ಭದಲ್ಲಿ ಜಾನುವಾರುಗಳಿಗೆ ರೋಗ ರುಜುನುಗಳು ಹರಡುವ ಬಿತಿಯಿಂದ ದೇವಸ್ಥಾದ ಆವರಣದಲ್ಲಿ ಎತ್ತುಗಳ ಪ್ರವೇಶವನ್ನು ನಿಷೇದಿಸಲಾಗಿದೆ
ಶ್ರೀ ಅರಣ್ಯ ಸಿದ್ದೇಶ್ವರ ಟ್ರಸ್ಟ್ ಯಲ್ಪಾರಟ್ಟಿ ಮತ್ತು ಖೇಮಲಾಪುರ ಹಾಗೂ ಸಮಸ್ತ ಗ್ರಾಮಸ್ಥರು ವತಿಯಿಂದ ಸರ್ವರಿಗೂ ಸ್ವಾಗತ ಕೊರಿದ್ದಾರೆ ಈ ಸಂದರ್ಭದಲ್ಲಿ ದೇವಸ್ಥಾನದ ಪೂಜಾರಿಗಳಾದ ಚಾಮರಾಜ ಒಡೇಯರ,ಗಣ್ಯರಾದ ಸುನೀಲಗೌಡ ಪಾಟೀಲ ಹಾಗೂ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಅಮಿತ ಖವಟಕೋಪ್ಪ ಹಾಗೂ ಸವ೯ಸದಸ್ಯರು ಹಾಗೂ ಯಲ್ಪಾರಟ್ಟಿ &ಖೇಮಲಾಪೂರ ಗ್ರಾಮಗಳ ಗಣ್ಯಮಾನ್ಯರು ಉಪಸ್ಥಿತರಿದ್ದರು….
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
1) 7090108643,
2) 9538399608
3)9741197530