ಬೆಳಗಾವಿ
ವರದಿ :ಸಂಗಮೇಶ ಹಿರೇಮಠ
ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರರ ಬೃಹನ್ ಮಠದಲ್ಲಿ ಶ್ರೀ ಯಲ್ಲಾಲಿಂಗೇಶ್ವರ ಮಹಾಪ್ರಭುಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ದಿ.7 ರoದು ಶನಿವಾರ ಯೋಗ ಶಿಬಿರವನ್ನು ಆಯೋಜಿಸಲಾಗಿದೆ.
ರನ್ನ ಬೆಳಗಲಿ ಋಷಿ ಯೋಗಾಶ್ರಮದ ಯೋಗಾಚಾರ್ಯ ಸದಾಶಿವ ಗುರೂಜಿ ಅವರು ಪ್ರತಿನಿತ್ಯ ಬೆಳಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ಯೋಗ ಶಿಬಿರ ನಡೆಸಿಕೊಡುವರು.
ಶ್ರೀ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಪಾವನ ಸಾನಿಧ್ಯ ವಹಿಸುವರು.
ಈ ಯೋಗ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಭಕ್ತರು ಸೇರಿದಂತೆ ವಿವಿಧ ಹಳ್ಳಿಗಳಿಂದ ಜನರು ಶಿಬಿರದಲ್ಲಿ ಪಾಲ್ಗೊಳಲು ಮುಕ್ತ ಅವಕಾಶವಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.