ವರದಿ: ಸಂಗಮೇಶ ಹಿರೇಮಠ
ಮುಗಳಖೋಡ: ಪಟ್ಟಣದ ಶ್ರೀ ಚ.ವಿ.ವ ಸಂಘದ ಬ.ನೀ.ಕುಲಿಗೋಡ ಪದವಿ ಪೂರ್ವ ಕಾಲೇಜಿನಲ್ಲಿ ಕೇಂದ್ರದ ಆಯುಷ್ ಶಿಷ್ಟಾಚಾರದಂತೆ ಯೋಗ ದಿನಾಚರಣೆಯ ಕಾರ್ಯಕ್ರಮ ನಡೆಸಲಾಯಿತು.
ವಿದ್ಯಾರ್ಥಿಗಳು ಯೋಗ ಭಾಗಗಳಾದ ಪ್ರಾಣಾಯಾಮ, ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಆಸನಗಳ ಮೂಲಕ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು.

ಪ್ರಾಚಾರ್ಯರಾದ ಡಾ. ಮಧುಸೂದನ ಬೀಳಗಿ ಅವರು ಪತಂಜಲಿ ಮಹರ್ಷಿಯವರ ಪೋಟೋ ಪೂಜೆ ನೆರವೇರಿಸಿ ವಿದ್ಯಾರ್ಥಿಗಳಿಗೆ ಯೋಗದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಾ. ಎಂ.ಕೆ.ಬೀಳಗಿ, ಕೆ.ಎ.ಕಾಂಬಳೆ, ಕುಮಾರಿ ಆರ್.ಜಿ.ಹುಬ್ಬಳ್ಳಿ, ಎಸ್.ಬಿ.ಕೊಕಟನೂರ, ಪಿ.ಎ. ಹಿಪ್ಪರಗಿ, ಜೆ.ಆರ್.ಮೊಗವೀರ, ಪಿ.ಆರ್. ಶಿವಳ್ಳಿ, ಎಂ.ಜಿ. ಬಾಳೋಜಿ, ಎಸ್.ಎಸ್. ಆಶೋದೆ, ಎಲ್.ಎಂ. ಬೇವನೂರ, ಎಸ್.ಎಸ್.ಕುಂಬಾರ, ಕುಮಾರಿ ಜಿ.ಎಂ.ನಾಶಿ, ಎಸ್. ಟಿ. ಖೋತ, ಸಿದ್ದು ಗೋಕಾಕ, ಸಂಗಣ್ಣ ತೇಲಿ ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





