ಹಂದಿಗುಂದದಲ್ಲಿ ಯೋಗೇಶ್ ಖಾನಗೌಡ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಅದ್ದೂರಿ ಚಾಲನೆ

Share the Post Now

ವರದಿ : ಪ್ರಕಾಶ ಚ ಕಂಬಾರ

ಆಲಸ್ಯದ ಪೀಡೆ ತೊಲಗಿಸಲು ಕ್ರೀಡೆ ಅವಶ್ಯ: ಶಿವಲಿಂಗ ಸಿದ್ನಾಳ


ಮುಗಳಖೋಡ: ಮನೋ ಶಾರೀರಿಕ ಆಲಸ್ಯದ ಪೀಡೆ ತೊಲಗಿಸಲು ಕ್ರೀಡೆ ತುಂಬಾ ಅವಶ್ಯ ಎಂದು ಕೆ.ಎಲ್.ಇ ಕಾಲೇಜ್ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು. ಸಮೀಪದ ಹಂದಿಗುಂದ ಗ್ರಾಮದಲ್ಲಿ ಶ್ರೀ ಸಿದ್ಧೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದ 10ನೇ ವರ್ಷದ ಅಂತರರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಯೋಗೇಶ್ ಖಾನಗೌಡ ಕ್ರಿಕೆಟ್ ಟ್ರೋಫಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮೀಣ ಕ್ರೀಡೆ ನಶಿಸಿ, ಯುವಕರ ಹವ್ಯಾಸಗಳು ಹಳ್ಳ ಹಿಡಿಯುತ್ತಿರುವ ಈ ದಿನಗಳಲ್ಲಿ ಮಕ್ಕಳನ್ನು ಮನೆಯಿಂದ ಮತ್ತು ಮೋಬೈಲ್ ಮೇನಿಯಾದಿಂದ ಮೈದಾನಕ್ಕೆ ಕರೆತರುವ ಇಂಥ ಪಂದ್ಯಾವಳಿಗೆ ಲಕ್ಷ ಲಕ್ಷ ಖರ್ಚು ಮಾಡಿ ಯುವಕರು ಕ್ರೀಡೆ ಕಡೆ ಲಕ್ಷ್ಯ ವಹಿಸುವಂತೆ ಮಾಡಿದ ಗ್ರಾಮದ ಯುವಕ, ಪಿ.ಎಸ್.ಐ ಯೋಗೇಶ ಖಾನಗೌಡ ಕಳಕಳಿ ಶ್ಲಾಘನೀಯ ಎಂದರು.
ಗ್ರಾಪo ಮಾಜಿ ಸದಸ್ಯ ಹನಮಂತ ಗಸ್ತಿ ಮಾತನಾಡಿ ಯುವಕರು ಕ್ರೀಡಾಮನೋಭಾವದಿಂದ ಇಂಥ ಪಂದ್ಯಗಳಲ್ಲಿ ಭಾಗವಹಿಸುವ ಮೂಲಕ ಸದೃಢರಾಗಬೇಕು ಎಂದರು. ಕರ್ಲಟ್ಟಿ ಮಾತನಾಡಿದರು.
ಪ್ರಗತಿಪರ ರೈತ ಶಿವಪ್ಪ ಮಿರ್ಜಿ ಮೈದಾನ ಪೂಜೆ ನೆರವೇರಿಸಿದರು. ಗ್ರಾಪಂ ಸದಸ್ಯ ವಿಶ್ವನಾಥ ಖಾನಗೌಡ ಸಸಿಗೆ ನೀರುಣಿಸಿ, ನಂತರ ರಿಬ್ಬನ್ ಕತ್ತರಿಸುವ ಮೂಲಕ ಕ್ರೀಡಾಕೂಟ ಉದ್ಘಾಟಿಸಿದರು.
ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಒಟ್ಟು 28 ತಂಡಗಳು ಭಾಗವಹಿಸಿದ್ದವು. ಪ್ರಕಾಶ ಕರ್ಲಟ್ಟಿ, ಮೀರಾಸಾಬ ತಟಗಾರ, ನೈಯಿಮ ಅರಳಿಕಟ್ಟಿ ನಿಣಾ೯ಯಕರಾಗಿದ್ದರು.
ಗ್ರಾಪಂ ಸದಸ್ಯ ಸಂಗಪ್ಪಗೌಡ ಮಿರ್ಜಿ, ಗ್ರಾಪo ಮಾಜಿ ಸದಸ್ಯ ಹಣಮಂತ ಗಸ್ತಿ, ರುದ್ರಪ್ಪ ಭದ್ರಶೆಟ್ಟಿ, ರಮೇಶ ಉಳ್ಳಾಗಡ್ಡಿ, ಪ್ರಭು ಚಿಂಚಲಿ, ಮುರಿಗೆಪ್ಪ ಅಂದಾನಿ, ಶ್ರೀಶೈಲ ಬಡಿಗೇರ, ರಾಜು ಅಂದಾನಿ, ಪರಪ್ಪ ಸುಳ್ಳನವರ, ಪರಮಾನಂದ ಉಳ್ಳಾಗಡ್ಡಿ, ಚೆನ್ನಪ್ಪ ಬನಾಜ, ಬಸವರಾಜು ಪರಮಶೆಟ್ಟಿ, ನಾಗಪ್ಪ ಅಂದಾನಿ, ಮಹಾದೇವ ಬಿರಾಜ, ಮಹಾಲಿಂಗ ಕಾಳೆ, ಶಿವಲಿಂಗ ಬಾಗೇವಾಡಿ, ಕುಮಾರ ಹಿರೇಮಠ, ಗುರುರಾಜ ಬಂದಿ ಸೇರಿದಂತೆ ಇತರರು ಇದ್ದರು. ಉಪನ್ಯಾಸಕ ರಮೇಶ ಪಾಟೀಲ ಸ್ವಾಗತಿಸಿದರು. ಶಿಕ್ಷಕ ವೈ.ಎಸ್. ಜಕನೂರ ನಿರೂಪಿಸಿದರು. ಷಣ್ಮುಖ ಸುತಾರ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!