ಬೆಳಗಾವಿ
ವರದಿ :ಸಚಿನ ಕಾಂಬ್ಳೆ
ಪರಮಾನಂದವಾಡಿ: ಶ್ರೀ ಜೆ.ಪಿ.ಎಸ್ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ ಪರಮಾನಂದವಾಡಿ,ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ಮತದಾರರ ಜಾಗೃತಿ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ “ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ.ರಾಜು ಕಾಂಬಳೆ ,ಹೆಚ್ಚಿನ ಪ್ರಮಾಣದಲ್ಲಿ ಮತದಾರರನ್ನು ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸುವ ಸಲುವಾಗಿ ‘ಭಾರತ ಸರಕಾರವು ಪ್ರತಿವರ್ಷ ಜನವರಿ ೨೫ ಅನ್ನು ‘ರಾಷ್ಟ್ರೀಯ ಮತದಾರರ ದಿನ’ ಎಂದು ಆಚರಿಸಲು ನಿರ್ಧರಿಸಿದೆ. ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ಸವಿನೆನಪಿಗಾಗಿ ಗುರುತಿಸಲು ಇದನ್ನು ೨೫ ಜನವರಿ ೨೦೧೧ರಿಂದ ಪ್ರಾರಂಭಿಸಲಾಗಿದೆ ಎಂದರು.
ನಂತರ ಉಪಪ್ರಾಚಾರ್ಯರಾದ ಅಶೋಕ ಶಿಹಟ್ಟಿ ಮಾತನಾಡಿ,ಮತದಾನದ ಕುರಿತಾಗಿ ನಾಗರೀಕರಲ್ಲಿ ಅದರಲ್ಲೂ ವಿಶೇಷವಾಗಿ ಯುವ ಮತದಾರರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ನಾಗರೀಕರನ್ನ ಚುನಾವಣಾ ಪ್ರಕ್ರೀಯೆಯಲ್ಲಿ ಸಕ್ರೀಯವಾಗಿ ಪಾಲ್ಗೊಳುವಂತೆ ಪ್ರೊತ್ಸಾಹಿಸುವ ನಿಟ್ಟಿನಡಿಯಲ್ಲಿ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಮತದಾರರು ಬದ್ಧರಾಗಿರುವಂತೆ ಉತ್ತೇಜಿಸುವುದೇ ಈ ಮತದಾರರ ದಿನಾಚಾರಣೆಯಾಗಿದೆ. ಈ ಹಿನ್ನಲೆ ಅಡಿಯಲ್ಲಿ ಭಾರತದ ಚುನಾವಣಾ ಆಯೋಗ ಹಾಗೂ ತಾಲ್ಲೂಕಾಡಳಿತದ ಸಂಯುಕ್ತಾಶ್ರಯದಲ್ಲಿ ಮತದಾರರ ದಿನವನ್ನು ಆಚರಿಸುತ್ತಿದ್ದೇವೆ. ಮತ ಚಲಾಯಿಸುವುದಕ್ಕಿಂತ ಬೇರೆನೂ ಇಲ್ಲ, ನಾನು ಮತ ಚಲಾವಣೆ ಖಾತ್ರಿ ಪಡಿಸುವೆ ಎಂಬ ಧ್ಯೇಯ ವಾಕ್ಯದೊಂದಿಗೆ ಈ ವರ್ಷದ ಮತದಾರರ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ನಂತರ ಮುಖ್ಯ ಅತಿಥಿ ದೇವೆಂದ್ರ ದುರದುಂಡಿ ಮಾತನಾಡಿ,ಮತದಾನ ಮಾಡುವುದು ನಮ್ಮ ನಾಗರಿಕ ಜವಾಬ್ದಾರಿ ಇದು ರಾಷ್ಟ್ರ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಮತದಾನದಿಂದ ನಮ್ಮ ಭವ್ಯಭಾರತದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಸಾಧ್ಯ ಎಂದರು.
ಈ ವೇಳೆ ಪ್ರಾಚಾರ್ಯರಾದ ಡಾ.ರಾಜು ಕಾಂಬಳೆಉಪಪ್ರಾಚಾರ್ಯರಾದ ಅಶೋಕ ಶಿರಹಟ್ಟಿ,,ಡಾ.ಕವಿತಾ ಘಟಕಾಂಬಳೆ,ದೇವೆಂದ್ರ ದುರದುಂಡಿ,ಎಸ್ ಎಮ್ ಬೊಮನಾಳ ಹಾಗೂ ಶಿಕ್ಷಕ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಇದ್ದರು.