ವರದಿ:ಸಚಿನ ಕಾಂಬ್ಳೆ.
ಕಾಗವಾಡ: ಡಾ.ಬಾಬಾಸಾಹೇಬ ಅಂಬೇಡ್ಕರ್ ರರು ಮೇಲು ಕೀಳು,ಭೇದಭಾವ,ಸ್ಪ್ರಶ್ಯ-ಅಸ್ಪೃಶ್ಯ,ಜಾತಿ ಲಿಂಗ ತಾರತಮ್ಯದ ಅಸಮಾನತೆಯನ್ನು ಹೇರುವ ದಲಿತ ಹಿಂದುಳಿದ ಹಾಗೂ ಶೂದ್ರ ಸಮುದಾಯಗಳ ವಿರೋಧಿ ಮನುಸ್ಮೃತಿ ದಹನ ದಿನವನ್ನು “ಬನ್ನಿ ಸಂವಿಧಾನವನ್ನು ಎದೆಗೊಪ್ಪಿಕೊಳ್ಳೋಣ ಮನುಸ್ಮೃತಿಗೆ ಕೊಳ್ಳಿ ಇಡೋಣ” ಎಂಬ ಕಾರ್ಯಕ್ರಮಕ್ಕೆ ಎಲ್ಲ ದಲಿತ ಬಾಂಧವರು ಕಾಗವಾಡ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಆಗಮಿಸಿ ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಸಂಜಯ ತಳವಲ್ಕರ ಹೇಳಿದರು.
ಅವರು ಶುಕ್ರವಾರ ದಿ.23 ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದಲಿತ ಜನಾಂಗದ ಮೇಲೆ ಮನುಸ್ಮೃತಿ ಮೂಲಕ ದಬ್ಬಾಳಿಕೆ ರೂಪದಲ್ಲಿ ಬ್ರಾಹ್ಮಣವಾದಿಗಳು ರಚಿಸಿರುವ ವ್ಯೂಹದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಅದರಿಂದ ದಲಿತರನ್ನ ರಕ್ಷಣೆ ಮಾಡಲು ಡಿ.25 ರಂದು ಮನುಸ್ಮೃತಿಯನ್ನು ದಹನ ಮಾಡಿದರು.ಆ ದಿನವನ್ನು ನಾವೆಲ್ಲ ದಲಿತ ಬಾಂಧವರು ಸೇರಿಕೊಂಡು “ಬನ್ನಿ ಸಂವಿಧಾನವನ್ನು ಎದೆಗೊಪ್ಪಿಕೊಳ್ಳೋಣ” ‘ಮನುಸ್ಮೃತಿ’ ಗೆ ಕೊಳ್ಳಿ ಇಡೋಣ ಎಂಬ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಕಾಗವಾಡ ತಾಲ್ಲೂಕಾ ದಲಿತರೆಲ್ಲರೂ ಸೇರಿಕೊಂಡು ಕಾಗವಾಡ ಪಟ್ಟಣದ ಚನ್ನಮ್ಮ ವೃತ್ತಕ್ಕೆ ಆಗಮಿಸಿ ಮನುಸ್ಮ್ರತಿ ದಹನ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹೇಳಿದರು.