ಬೆಳಗಾವಿ
ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಕಾರ್ಯಕ್ರಮವು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ,ಕಲಾ,ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ರಾಯಬಾಗ ಹಾರೂಗೇರಿ ಇವರ ಸಹಯೋಗದಲ್ಲಿ , ರಾಷ್ಟ್ರೀಯ ಸೇವಾ ಯೋಜನೆಯ, ಎಳು ದಿನಗಳ ವಿಶೇಷ ಶಿಬಿರ 2023. ಅಮೃತ ಸಮುದಾಯ ಯೋಜನಾ ಅಭಿವೃದ್ದಿ ಯೋಜನೆಯಲ್ಲಿ ಕೋಳಿ ಗುಡ್ಡ ಗ್ರಾಮವನ್ನು ದತ್ತು ಗ್ರಾಮವನ್ನು ತಗೆದುಕೊಂಡಿದ್ದೇವೆ.
ಮಾರ್ಚ್ 4 ರಿಂದ ಮಾರ್ಚ್ 10 ರವರೆಗೆ ವಿಶೇಷ ಶಿಬಿರ ನಡೆಯಲಿದೆ. ಉದ್ಘಾಟಕರಾಗಿ ಶ್ರೀಮತಿ ಮಂಜುಳಾ ಮಾದರ, ಮುಖ್ಯ ಅತಿಥಿಗಳಾಗಿ ಶ್ರೀ ಶರಣಪ್ಪ ಗೌಡ ಪಾಟೀಲ್,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಎಲ್ ಎಸ್ ಧರ್ಮಟ್ಟಿ ವಹಿಸಲಿದ್ದಾರೆ. ವೇದಿಕೆಯ ಮೇಲೆ ಹಿರಿಯ ಉಪನ್ಯಾಸಕರಾದ ಡಾ. ಸಿ ಡಿ ಠಾಣೆ, ಪ್ರೊ ಡಿ ಎಂ ನಾಯ್ಕ ಉಪಸ್ಥಿತರಿರುವರು ಎಂದು ಶಿಬಿರಾಧಿಕಾರಿಗಳಾದ ಪ್ರೊ. ಬಿ ಏ ಕಾಂಬಳೆ ಮತ್ತು ಸಹ ಶಿಬಿರಾಧಿಕಾರಿ ಗಳಾದ ಬಂಡಾಯ ಯುವ ಸಾಹಿತಿ ಮತ್ತು ಕನ್ನಡ ಉಪನ್ಯಾಸಕರಾದ ಡಾ. ವಿಲಾಸ್ ಕಾಂಬಳೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವರದಿ : ಸುನೀಲ್ ಕಬ್ಬೂರ