ಬೆಳಗಾವಿ:ರಾಯಬಾಗ ತಾಲೂಕಿನ ಜಲಾಲಪೂರ ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರನ್ನು KHPS ಜಲಾಲಪೂರ ಶಾಲೆಯ ವತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಜಗದಾಳೆ ಉಪಾಧ್ಯಕ್ಷರಾದ ಶ್ರೀ ಮೌಲಾ ನದಾಫ್ ಹಾಗೂ ಸದಸ್ಯರಾದ ಶ್ರೀ ವಿಲಾಸ ಹೇರವಾಡೆ, ನಾಮದೇವ ಕಾಂಬಳೆ,ಸಂಜಯ ಜಾಧವ, ವಿನಾಯಕ ಪವಾರ, ಪಾಂಡು, ಆನಂದ ಚೌಗಲಾ, ಶ್ರೀಮತಿ ಪಾರ್ವತಿ ದಾಸರ, ಮಲ್ಲವ್ವ ಕಾಂಬಳೆ, ಮೀನಾಕ್ಷಿ ಮಾನೆ ಹಾಗೂ ಯುವ ಕವಯತ್ರಿ ಶ್ರೀಮತಿ ಶೃತಿ ಹೆಗ್ಗೆ, ಭಾರತೀಯ ಸೇನೆಗೆ ನೇಮಕಾತಿಗೊಂಡ ಪ್ರಿಯಾಂಕಾ ಸಟಾಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಮಲ್ಲು ಜಗದಾಳೆ, ರಾಜು ಜಾದವ, ನಾನಾಸಾಬ ಸೋನಾರ, ದಿಲೀಪ ಹವಾಲ್ದಾರ, ರಾಜು ಮುರಚಿಟ್ಟೆ,ರಾಹುಲ ಹೇರವಾಡೆ, ಸಿದ್ದು ಚೌಗಲಾ ಹಾಗೂ SDMC ಸದಸ್ಯರು, ಊರಿನ ಪ್ರಮುಖರು ಪಾಲ್ಗೊಂಡಿದ್ದರು.
ಶ್ರೀ ಬಸು ಅವ್ವನ್ನವರ ಅಧ್ಯಕ್ಷತೆ ವಹಿಸಿದ್ದರು. ಶ್ರೀ L.B.ಬಂಡಗರ ನಿರೂಪಿಸಿದರು. ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ವೀಣಾ B.S. ಸ್ವಾಗತಿಸಿದರು. ಶಿಕ್ಷಕಿ ಆಸ್ಮಾ ನದಾಫ ವಂದಿಸಿದರು.