ಈ ವೇಳೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ, ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಜಾವೇದ್ ಖಾಜಿ, ನಿಪ್ಪಾಣಿ ತಾಲೂಕ ಅಧ್ಯಕ್ಷ ನಜೀರ್ ಶೇಖ,ಹಾಗೂ ಜಾತ್ಯತೀತ ಜನತಾದಳ ಪಕ್ಷದ ಅಲ್ಪಸಂಖ್ಯಾತ ಬೆಳಗಾವಿ ವಿಭಾಗದ ಅಧ್ಯಕ್ಷ ಜರಾರ್ ಖಾನ್ ಪಠಾಣ್, ಸಮಾಜ ಸೇವಕರು ಅವಿನಾಶ್ ಮಾನೆ, ಹರಿಶ ಸನಧಿ, ಸಾಗರ್ ಮಿರ್ಜೆ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ,ಹಾಗೂ ಸಾರ್ವಜನಿಕರ ಹಲವಾರು ಸಮಸ್ಯೆಗಳನ್ನು, ಬಗೆಹರಿಸಿ ಕೊಡಬೇಕೆಂದು ಬಿಗಿಪಟ್ಟು ಹಿಡಿದಿದ್ದರು,
ನೂರಾರು ಸಾರ್ವಜನಿಕರಿಂದ ಇದೆ ಸಂದರ್ಭದಲ್ಲಿ, ನಗರಸಭೆ ಆಡಳಿತ ಮಂಡಳಿ ,ಹಾಗೂ ಪೌರಾಯುಕ್ತ ಸೇರಿದಂತೆ ಇನ್ನುಳಿದ, ಪಾಲಿಕೆ ಅಧಿಕಾರಿಗಳನ್ನು, ತರಾಟೆಗೆ ತೆಗೆದುಕೊಂಡರು,
ಸಾರ್ವಜನಿಕರ ವಿವಿಧ ಸಮಸ್ಯೆಗಳು, ಈ ಕೆಳಗಿನಂತಿವೆ 24 ಗಂಟೆ ನೀರಿನ ಯೋಜನೆಯಲ್ಲಿ, ಭಾರಿ ಭ್ರಷ್ಟಾಚಾರ ನಡೆದಿದ್ದು ,ಜೈನ್ ಇರಿಗೇಶನ್ ಕಂಪನಿ ಮನಬಂದಂತೆ ,ಸಾರ್ವಜನಿಕರಿಂದ ಪ್ರತಿ ತಿಂಗಳಿಗೆ ನೀರಿನ ಕರ, ಪಾವತಿಗಳನ್ನು ಅಥವಾ ಬಿಲ್ಲುಗಳಿಗಾಗಿ, ವಸುಲಿಗಾಗಿ ಮುಂದಾಗಿದೆ,
ಪ್ರತಿ ತಿಂಗಳಿಗೆ ನೀರು ಬರದೇ, ಇದ್ದರೂ ಸುಮಾರು 10,000/, 13,000/, 20,000/ ಸಾವಿರ ರೂಪಾಯಿಗಳಂತೆ, ನೀರಿನ ಕರ ಪಾವತಿ ನೀಡಿ, ವಸಲಿಗೆ ಮುಂದಾಗಿರುತ್ತಾರೆ,
ಇದನ್ನು ವಿರೋಧಿಸಿ ನಗರಸಭೆಯಲ್ಲಿ ,ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ, ಹಾಗೂ ಜಾತ್ಯತೀತ ಜನತಾದಳ ಪಕ್ಷ, ವಿರೋಧ ವ್ಯಕ್ತಪಡಿಸಿದೆ ನಿಪ್ಪಾಣಿ ನಗರದ, ಪ್ರಮುಖ ರಸ್ತೆಗಳು ಹದಗೆಟ್ಟು ಹೋಗಿವೆ, ರಸ್ತೆಯ ಮಧ್ಯದಲ್ಲಿ ಗುಂಡಿಗಳು, ಬಿದ್ದಿವೆ ಇದರ ಪರಿಣಾಮ, ಪ್ರತಿನಿತ್ಯ ವಾಹನ ಸವಾರರು, ಅಪಘಾತ ಕಿಡಾಗುತ್ತಿದ್ದಾರೆ,
ವಾರ್ಡಗಳಲ್ಲಿ ಸರಿಯಾಗಿ ರಸ್ತೆಗಳಿಲ್ಲ, ಗಟರುಗಳಿಲ್ಲ, ಗಟರುಗಳನ್ನು ಸ್ವಚ್ಛತೆ ಮಾಡುತ್ತಿಲ್ಲ, ಸಾರ್ವಜನಿಕರ ಶೌಚಾಲಯಗಳು, ಗಬ್ಬೆದು ದುರ್ವಾಸನೆಯಿಂದ ನಾರುತ್ತಿವೆ, ಕೆಲ ಸಾರ್ವಜನಿಕ ಶೌಚಾಲಯಗಳಂತೂ, ಬೀಳುವ ಪರಿಸ್ಥಿತಿಯಲ್ಲಿವೆ, ಶೌಚಾಲಯಗಳಿಗೆ ಸರಿಯಾಗಿ ನೀರಿನ ವ್ಯವಸ್ಥೆಗಳಿಲ್ಲ,
ನಗರ ಪಾಲಿಕೆಯಿಂದ ನಿರ್ಮಿಸಿರುವ, ನೂರಾರು ಮಳಿಗೆಗಳು ಬೇರೆ ಬೇರೆ, ವ್ಯಕ್ತಿಗಳಿಗೆ ಮಾರಾಟವಾಗಿವೆ, ನೂರಾರು ಮಳಿಗೆಗಳು ಈವರೆಗೆ, ಸರಿಯಾಗಿ ಅಂಗಡಿಗಳ ಲೀಲಾವ ಕೂಡ ಆಗಿಲ್ಲ, ಟೆಂಡರ್ ಮೂಲಕ ಅಂಗಡಿಗಳನ್ನು, ಬಾಡಿಗೆ ಪಡೆದು ಬೇರೆಯವರಿಗೆ ಮಾರಾಟ ಮಾಡಿರುತ್ತಾರೆ,
ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು, ಸಾರ್ವಜನಿಕರ ಒತ್ತಾಯ, ನಿಪ್ಪಾಣಿ ಬಸ್ ನಿಲ್ದಾಣದಿಂದ, ಸಂಪೂರ್ಣವಾಗಿ ಚಿಕ್ಕೋಡಿ ರಸ್ತೆ, ಅಕ್ಕೊಳ ರಸ್ತೆ, ಹಳೆ ಪಿ ಬಿ ರಸ್ತೆ ಯಲ್ಲಿರುವ ಸ್ಟ್ರೀಟ್ ಲೈಟ್ ಗಳು, ಅಥವಾ ಬೀದಿ ದೀಪಗಳು, ರಾತ್ರಿ ವೇಳೆಯಲ್ಲಿ ಬಂದಾಗಿರುತ್ತವೆ, ಕೂಡಲೇ ಅವುಗಳನ್ನು ಪ್ರಾರಂಭಿಸಲು ಒತ್ತಡ,
ನಿಪ್ಪಾಣಿ ತಾಲೂಕಿನ ಸುಮಾರು, ದಿನಗಳ ಬೇಡಿಕೆಯಾದ ತಾಲ್ಲೂಕಿಗೆ ಪತ್ರಕರ್ತರ, ಸಂಘದ ಭವನವನ್ನು ಕೂಡಲೇ ನಿರ್ಮಿಸಿ, ಕೊಡಬೇಕೆಂದು ಪತ್ರಕರ್ತರ ಸಂಘದಿಂದ, ಮನವಿ ನೀಡಲಾಯಿತು,
ನಿಪ್ಪಾಣಿ ನಗರ ಹಾಗೂ ಸುತ್ತಮುತ್ತಲಿನ, ಹೊರ ವಲಯದಲ್ಲಿರುವ, ಗಾರ್ಡನ್ ಅಥವಾ ಉದ್ಯಾನವನಗಳನ್ನು, ಕೂಡಲೇ ದುರಸ್ತಿಗೊಳಿಸಬೇಕು ಅಲ್ಲದೆ, ಸ್ವಚ್ಛತೆ ಗೊಳಿಸಬೇಕು ,ಹಾಗೂ ಅಲ್ಲಿ ಕಾರ್ಮಿಕರನ್ನು ನೇಮಿಸಬೇಕು, ಎಂದು ಮಾಜಿ ನಗರಸೇವಕ, ದಿಲೀಪ್ ಪಟಾಡೆ ಒತ್ತಾಯಿಸಿದರು,
ಈ ಸಂದರ್ಭದಲ್ಲಿ ದಲಿತ ಮುಖಂಡ ,ಸುಧಾಕರ್ ಮಾನೆ ಮಾತನಾಡಿ, ಸುಮಾರು ಬಾರಿ ನಿಪ್ಪಾಣಿ ನಗರಕ್ಕೆ, ವಿಶ್ವರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್, ಅವರು ಭೇಟಿ ನೀಡಿರುತ್ತಾರೆ,ಆದಕಾರಣ ಕ್ರಾಂತಿ ಸ್ತಂಭವನ್ನು ,ಕಲ್ಲಿನಿಂದ ಸುಸಜ್ಜಿತ ಒಳ್ಳೆಯ ರೀತಿಯ, ಕಟ್ಟಡ ಕಾಮಗಾರಿ ನಿರ್ಮಿಸಬೇಕು,
ಹಾಗೂ ಪ್ರವಾಸಿ ಸ್ಥಾನವನ್ನಾಗಿ ಮಾಡಬೇಕು, ಎಂದು ಆಡಳಿತ ಮಂಡಳಿ, ಮೇಲೆ ಒತ್ತಡ ಹೇರಿದರು, ಹಿರಿಯ ಸಾರ್ವಜನಿಕರೊಬ್ಬರು ಕೇಂದ್ರ, ಗ್ರಂಥಾಲಯದಲ್ಲಿ ವಿವಿಧ, ರೀತಿಯ ಪುಸ್ತಕಗಳು, ಕಾದಂಬರಿಗಳು, ಅಲ್ಲದೆ ಸಾಮಾಜಿಕ ಜ್ಞಾನದ ಪುಸ್ತಕಗಳು, ಕವನಗಳು ಸಾರ್ವಜನಿಕರ ಬೇಡಿಕೆಯಾಗಿದ್ದು,
ಈ ಗ್ರಂಥಾಲಯವನ್ನು ಹೈಟೆಕ್, ಗ್ರಂಥಾಲಯವಾಗಿ ಏರ್ಪಡಿಸಬೇಕು, ಆದಷ್ಟು ಬೇಗನೆ ಒಳ್ಳೆಯ ರೀತಿಯ ,ಪುಸ್ತಕಗಳನ್ನು ಜನರಿಗೆ ಓದಲು ಅವಕಾಶ ಮಾಡಿಕೊಡಬೇಕು, ಎಂದು ಒತ್ತಾಯಿಸಿದರು,
ಮಾಂಸ ಮಾರಾಟ ದಂಧಕೋರರು, ನಗರದ ಹೊರವಲಯದಲ್ಲಿ ಕತ್ತಲ್ ಕೋಣೆ ,ನಿರ್ಮಿಸಿ ಕೊಡಬೇಕೆಂದು ಹಾಗೂ ಅನುಮತಿ ,ನೀಡುವ ಬಗ್ಗೆ ವಿನಂತಿಸಿದ್ದರು, ಹಾಗೂ ಆಕಳುಗಳ ಹತ್ಯ ಮಾಡುವವರಿಗೆ ,ಪಾಸಿ ಸಜಾ ನೀಡಿ ಎಂದು ಚರ್ಚಿಸಿದರು,
ನಂತರ ನಗರ ಪಾಲಿಕೆಯ ಕರ್ಮಚಾರಿಗಳ ,ವೇತನವನ್ನು ಸಮಯಕ್ಕೆ ಸರಿಯಾಗಿ ನೀಡಬೇಕು, ಹಾಗೂ ಈ ಹಿಂದಿನ ತಿಂಗಳುಗಳ, ವೇತನವನ್ನು ನೀಡಬೇಕೆಂದು ,ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು,
ಹಾಗೂ ನಗರ ಸಭೆಯ ಸ್ಥಳೀಯ, ಸಂಸ್ಥೆಯ ಇಂಗ್ಲೀಷ್ ಮೇಡಿಯಂ ,ಶಾಲೆಯ ಶಿಕ್ಷಕರ ವೇತನವನ್ನು ಕೂಡ ಆದಷ್ಟು ಬೇಗನೆ ನೀಡಬೇಕು, ಎಲ್ಲ ವಿಷಯಗಳನ್ನು ನಗರಸಭೆಯಲ್ಲಿ, ಪಾಲಿಕೆ ಅಧ್ಯಕ್ಷ ಜಯವಂತ್ ಬಾಟಲೆ, ಗಂಭೀರವಾಗಿ ಪರಿಗಣಿಸಿ, ಹಾಗೂ ಸಾರ್ವಜನಿಕರ ಅಹವಾಲುಗಳನ್ನು, ಸ್ವೀಕರಿಸಿ ಆದಷ್ಟು ಬೇಗನೆ ಈ ಎಲ್ಲಾ ಸಮಸ್ಯೆಗಳನ್ನು, ಬಗೆಹರಿಸಿ ಪರಿಹಾರ ನೀಡುವುದಾಗಿ, ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ಜೈವಂತ ಬಾಟಲೆ, ಉಪನಗರ ಅಧ್ಯಕ್ಷೆ ನೀತಾ ಬಾಗಡೆ, ಪಾಲಿಕೆ ಸಭಾಪತಿ ರಾಜು ಗುಂದೇಶಾ, ಪೌರಾಯುಕ್ತ ಜಗದೀಶ್ ಹುಲಗೆಜ್ಜೆ, ಕಂದಾಯ ಅಧಿಕಾರಿ ಸುನಿಲ್ ಕಾಂಬಳೆ, ಸಂತೋಷ್ ಸಾಂಗಾವ್ಕರ್, ದತ್ತಾ ಜೋತ್ರೆ, ನಗರಸೇವಕಿಯವರಾದ, ಉಪಾಸನ ಗಾರವೆ, ಅರುನಾ ಮಧುಕುಡೆ,ಕಾವೇರಿ ಮಿರ್ಜೆ, ರಾಣಿ ಶೇಲಾರ್,ಸೋನಾಲಿ ಉಪಾಧ್ಯ,ರಂಜಿತಾ ಬಾಟಲೆ, ಇನ್ನುಳಿದ ನಗರಸೇವಕರು, ಸಾರ್ವಜನಿಕರು, ಪತ್ರಕರ್ತರು, ನಗರಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು, ಉಪಸ್ಥಿತರಿದ್ದರು.
ವರದಿ :ರವಿ ಬಿ ಕಾಂಬಳೆ ಬೆಳಗಾವಿ