ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೊಗಿನಿಹಾಳ ಗ್ರಾಮದಲ್ಲಿ ಇಂದು ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷರಾದ ಚಿನ್ನಪ್ಪಾ ಕುಂದರಗಿ ಇವರ ಮಾರ್ಗದರ್ಶನದಲ್ಲಿ ಶಾಖಾ ನಾಮ ಫಲಕಗಳನ್ನು ಉದ್ಘಾಟಿಸಲಾಯಿತು. ಜಿಲ್ಲಾಧ್ಯಕ್ಷರಾದ ಶ್ರೀಕಾಂತ ಚೌಗಲಾ ಅವರು ಮಾತನಾಡಿ ಭ್ರಷ್ಟಾಚಾರ ಅನ್ಯಾಯ ದಬ್ಬಾಳಿಕೆ ಇದರ ವಿರುದ್ಧ ನಮ್ಮ ಹೋರಾಟ ಅಧಿಕಾರಿಗಳ ವಿರುದ್ಧ ನಮ್ಮ ಹೋರಾಟವಲ್ಲ ಭ್ರಷ್ಟ ಅಧಿಕಾರಿಗಳ ವಿರುದ್ಧ ನಮ್ಮ ಹೋರಾಟ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿಯು ಪ್ರತಿ ಗ್ರಾಮಗಳಲ್ಲಿ ಇದರ ಬಗ್ಗೆ ತಿಳುವಳಿಕೆ ನೀಡಿ ಭ್ರಷ್ಟಾಚಾರವನ್ನು ತಡೆಯುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಪ್ರತಿ ಗ್ರಾಮಮಟ್ಟದಲ್ಲಿ ಈ ಸಮಿತಿಯನ್ನು ರಚನೆ ಮಾಡಲಾಗುವುದು ಯಾವುದೇ ರೀತಿಯ ಬಡವರಿಗೆ ಅನ್ಯಾಯವಾಗಬಾರದು ಎಂಬುದೇ ಈ ಸಮಿತಿಯ ಮುಖ್ಯ ಉದ್ದೇಶವಾಗಿರುತ್ತದೆ ಈ ಮೂಲಕ ಅಧಿಕಾರಿಗಳಿಗೆ ತಿಳಿಸುವುದೇನೆಂದರೆ ಬಡವರಿಗೆ ಸರಕಾರದ ಸೌಲಭ್ಯವನ್ನು ದುರುಪಯೋಗ ಗೊಳಿಸದೆ ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡಿ ಏನಾದರೂ ಅಂತಹ ಸಮಸ್ಯೆಗಳು ಕಂಡುಬಂದಲ್ಲಿ ನಮ್ಮ ಸಮಿತಿಯಿಂದ ಹೋರಾಡಲು ನಾವು ಸಿದ್ಧ ಮತ್ತು ಮಾಹಿತಿ ಹಕ್ಕನ್ನು ಬಲಪಡಿಸುವುದೆ ಈ ಸಮಿತಿಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು
ನಂತರ ಮಾತನಾಡಿದ ಹುಕ್ಕೇರಿ ತಾಲೂಕ ಗೌರವ ಅಧ್ಯಕ್ಷರಾದ ರವಿ ಬಿ ಕಾಂಬಳೆ ಸರ್ಕಾರದ ಸವಲತ್ತುಗಳಿಂದ ವಂಚನೆಗೆ ಒಳಗಾಗಿದ್ದವರನ್ನು ಗುರುತಿಸಿ ನ್ಯಾಯ ಒದಗಿಸುವುದೇ ನಮ್ಮ ಉದ್ದೇಶ ಇನ್ನು ಮುಂದೆ ಅಧಿಕಾರಿಗಳು ಭ್ರಷ್ಟಾಚಾರ ಮಾಡುವುದನ್ನು ನಿಲ್ಲಿಸಬೇಕು ಮತ್ತು ಮಾಹಿತಿ ಹಕ್ಕು ಅಧಿನಿಯಮ ಪ್ರಕಾರ ಹಿಂಬಾರವನ್ನು ಸರಿಯಾದ ಉತ್ತರ ನೀಡಲಿ ಸುಳ್ಳು ಹಿಂಬರವನ್ನು ನೀಡುವುದು ನಿಲ್ಲಿಸಲಿ ಇದೇ ರೀತಿ ಮುಂದುವರೆದರೆ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿಯು ಅಂತವರಿಗೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀಕಾಂತ ಚೌಗಲಾ.ಜಿಲ್ಲಾ ಉಪಾಧ್ಯಕ್ಷರು ಲಗಮಪ್ಪಾ ಕಾಳೆ.ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧರೇಪ್ಪಾ ಅಂತರಗಟ್ಟಿ.ಹುಕ್ಕೇರಿ ತಾಲೂಕಾ ಗೌರವಾಧ್ಯಕ್ಷರು ರವಿ ಬಿ ಕಾಂಬಳೆ.ತಾಲೂಕಾ ಅಧ್ಯಕ್ಷರಾದ ಸುಭಾಷ್ ದೇವಕತ್ತಿ.ಉಪಾಧ್ಯಕ್ಷರಾದ ಸುರೇಶ್ ಢಂಗಿ.ಕಾರ್ಯದರ್ಶಿ ಸಂಜೀವ ಕಟ್ಟಿಮನಿ.ಜಿಲ್ಲಾ ಸಂಚಾಲಕರು ಸುಭಾಷ್ ಗಡಕರಿ ಮತ್ತು ನೊಗಿನಿಹಾಳ ಗ್ರಾಮದ ಎಲ್ಲಾ ಸದಸ್ಯರು ಹಾಜರಿದ್ದರು.