ವರದಿ: ಸಂಗಮೇಶ ಹಿರೇಮಠ
ಮುಗಳಖೋಡ: ಶಿಕ್ಷಣ ಸಚಿವ ಬಿ ಸಿ ನಾಗೇಶ ಅವರು ಅಥಣಿ ಶಾಸಕ ಮಹೇಶ ಕುಮಟಳ್ಳಿಯವರ ಪುತ್ರನ ವಿವಾಹಕ್ಕೆ ಹೋಗುವಾಗ ಅಥಣಿ ಮತ್ತು ಗೋಕಾಕ ರಸ್ತೆಯ ಮಾರ್ಗಮಧ್ಯದಲ್ಲಿ ಮುಗಳಖೋಡ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕಂಟೆಪ್ಪನವರ ತೋಟದ ಶಾಲೆಗೆ ದಿಡಿರನೆ ಬೇಟಿ ನೀಡಿದರು.
ಶಾಲೆಯ ಆವರಣದಲ್ಲಿ ಆಗಮಿಸುತಿದ್ದಂತೆ ನಿಸರ್ಗದ ಮಧ್ಯ ಆವರಣದಲ್ಲಿ ಪಾಠಬೋಧನೆ ಮಾಡುತಿದ್ದ ಶಿಕ್ಷಕ ಎಮ್. ಎಸ್. ಕಳ್ಳಿಗುದ್ದಿ ಹಾಗೂ ಸಿಬ್ಬಂದಿಯವರ ಜೊತೆಗೆ ಮಾತುಕತೆ ನಡೆಸಿ, ಅಂಗಳದಲ್ಲಿ ಅಳವಡಿಸಿರುವ ಪ್ಯೂವರ್ಸ ಬಗ್ಗೆ ವಿಚಾರಿಸಿ ಮುಖ್ಯ ಶಿಕ್ಷಕರ ಕೊಠಡಿಗೆ ಹೋಗಿ ಶಿಕ್ಷಕರ ಹಾಜರಾತಿ ಪರಿಶೀಲಿಸಿ ಸಹಿ ಮಾಡಿದರು.
ನಂತರ 4 ಮತ್ತು 6 ನೇ ತರಗತಿಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತುಕತೆ ನಡೆಸಿ, ಪಠ್ಯ ಪುಸ್ತಕಗಳ ಬಗ್ಗೆ ಮಾಹಿತಿ ಪಡೆದು, ಹಲವಾರು ಪ್ರಶ್ನೆಗಳನ್ನು ಮಾಡಿ ಕಲಿಕಾ ಗುಣಮಟ್ಟವನ್ನು ಪರಿಶೀಲಿಸಿ ಶಿಕ್ಷಕರಿಗೆ ಸಲಹೆ ಸೂಚಣೆ ನೀಡಿದರು.
ರಾಯಬಾಗ ತಾಲೂಕಿನಲ್ಲಿಯೇ ಮಾದರಿಯ ಶಾಲೆಯಾಗಿ ಬೆಳವಣಿಗೆ ಹೊಂದಿರುವ ಈ ಶಾಲೆಗೆ ಶಿಕ್ಷಣ ಸಚಿವರ ದಿಡಿರಣೆ ಭೇಟಿ ವಿಶೇಷವಾಗಿತ್ತು.