ವರದಿ:ಸುಧಿರ ಕಳ್ಳೆ.ರಾಯಬಾಗ
ರಾಯಬಾಗ: ಕೃಷ್ಣಾ ನದಿ ಪ್ರವಾಹದಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಕೂಡಲೇ ಮನೆ ಪರಿಹಾರಧನ ಬಿಡುಗಡೆ ಮಾಡಬೇಕು ಮತ್ತು ಮನೆ ಮಂಜೂರು ಮಾಡಿಸಿಕೊಡಬೇಕೆಂದು ಆಗ್ರಹಿಸಿ ಕುಡಚಿ ಗ್ರಾಮೀಣದ ಸಂತ್ರಸ್ತರು ತಹಶೀಲ್ದಾರ ಆರ್.ಎಚ್.ಬಾಗವಾನ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
2021ರಲ್ಲಿ ಕೃಷ್ಣಾ ನದಿ ಪ್ರವಾಹದಿಂದ ತಮ್ಮಲ್ಲೆರ ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿ ಮನೆಗಳು ಬಿದ್ದು ಹೋಗಿರುತ್ತವೆ. ದಿನನಿತ್ಯ ಉಪಯೋಗಿಸುವ ವಸ್ತುಗಳು ಸಂಪೂರ್ಣವಾಗಿ ಹಾಳಾಗಿ ಹೋಗಿರುತ್ತವೆ ಮತ್ತು ಕಡುಬಡವರಾದ ತಾವು ಇನ್ನುವರೆಗೆ ಕುಟುಂಬ ಸಹಿತವಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡ ಸಂತ್ರಸ್ತರು. 2021ನೇ ಸಾಲಿನಲ್ಲಿ ಕೃಷ್ಣಾ ನದಿಯ ಪ್ರವಾಹದಿಂದ ಮುಳುಗಡೆಯಾದ ಮನೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಸಮೀಕ್ಷೆ ಮಾಡಿಕೊಂಡು ಹೋಗಿದ್ದರೂ, ಇನ್ನುವರೆಗೂ ತಮಗೆ ಸರಕಾರದಿಂದ ಯಾವುದೇ ಪರಿಹಾರಧನ ಬಿಡುಗಡೆ ಮಾಡಿರುವುದಿಲ್ಲ. ಮತ್ತು ಮನೆ ಕೂಡ ಮಂಜೂರು ಆಗಿರುವುದಿಲ್ಲವೆಂದು ಆರೋಪಿಸಿದರು.
ಸಂತ್ರಸ್ತರಾದ ತಮಗೆ ಮನೆ ಪರಿಹಾರಧನ ಬಿಡುಗಡೆ ಮಾಡಲು ಹಾಗೂ ಮನೆ ಮಂಜೂರು ಮಾಡಲು ವಿಳಂಬ ಮಾಡಿ ಕರ್ತವ್ಯಲೋಪವೆಸಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸರಕಾರ ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ ತಮಗೆ ಕೂಡಲೇ ಮನೆ ಪರಿಹಾರಧನ ಬಿಡುಗಡೆ ಮಾಡಿಸಿ, ಮನೆಗಳನ್ನು ಮಂಜೂರು ಮಾಡಿಸಬೇಕೆಂದು ಮನವಿ ಮಾಡಿಕೊಂಡರು.
ಇನ್ನು ಈ ಸಂದರ್ಭದಲ್ಲಿ
ಶಂಕರ ಜಮಖಂಡಿ, ಈರಗೌಡ ಗಿಣ ಮೂಗೆ, ಅಲೀಮಪಾಷಾ ಜಿನ್ನಾಬಡೆ, ಜೈನಾವುಲ ಜಿನ್ನಾಬಡೆ, ಜುಬೇದ ರೆಡ್ಡಿ, ಪ್ರಮೋದ ಬಾಲೋಜಿ, ಮೋಷಿನ ರೆಡ್ಡಿ, ಜುಬೇರ ಜಿನ್ನಾಬಡೆ, ಝಾಕೀರ ಜಿನ್ನಾಬಡೆ ಇದ್ದರು.