ವರದಿ:ಸಚಿನ ಕಾಂಬ್ಳೆ. ಕಾಗವಾಡ
ಕಾಗವಾಡ :ತಾಲೂಕಿನ ಜುಗುಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಶಹಾಪುರ್ ಗ್ರಾಮ ಸಂಪೂರ್ಣವಾಗಿ ಮಹಾಪೂರ ನೀರಿನಲ್ಲಿ ಮುಳುಗಡೆ ಯಾಗಿದ್ದರು ಇಲ್ಲಿಯ 92 ಕುಟುಂಬಗಳಿಗೆ 5 ಲಕ್ಷ ರೂ ಮನೆ ಕಟ್ಟಿಸಲು ಹಣ ನೀಡುವುದು ಬಿಟ್ಟು ಸಿ ಗ್ರೂಪ್ ನಲ್ಲಿ ಈ ಕುಟುಂಬಗಳನ್ನು ಸೇರಿಸಿ 50,000 ಪರಿಹಾರ ನೀಡುವ ನಿರ್ಧಾರ ಕೈಗೊಂಡಿದ್ದರಿಂದ ಸೋಮವಾರ ದಿನಾಂಕ 19 ರಂದು ಕಾಗವಾಡ ತಹಸಿಲ್ದಾರ್ ಕಚೇರಿ ಎದುರು ಅಮರನಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು. ಶಹಾಪೂರ ಗ್ರಾಮದಲ್ಲಿ ಸಂತ್ರಸ್ತರು ತಮ್ಮ ಅಳಲುವನ್ನು ತೋಡಿಕೊಂಡು ಉಪವಾಸ ಸತ್ಯಾಗ್ರಹ ಬಗ್ಗೆ ನಿರ್ಧಾರ ವ್ಯಕ್ತಪಡಿಸಿದರು.
ಗ್ರಾಮದ ಹಿರಿಯರಾದ ದೀಪಕ್ ಪಾಟೀಲ್, ಮಾಹಿತಿ ನೀಡುವಾಗ ತಾಲೂಕ ಅಧಿಕಾರಿಗಳು ಶಹಾಪುರ್ ಗ್ರಾಮದ ಗ್ರಾಮಸ್ಥರಿಗೆ ತುಂಬಾ ಅನ್ಯಾಯ ಮಾಡಿದ್ದಾರೆ, ಈ ಗ್ರಾಮ ಕೃಷ್ಣಾ ನದಿಯಲ್ಲಿ ಸಂಪೂರ್ಣವಾಗಿ ಮುಳುಗಡೆ ಆಗುವ ಗ್ರಾಮ, ಮಹಾಪೂರ ನೀರಿನಲ್ಲಿ ಮುಳುಗಡೆ ಆದ ದಲಿತ ಕುಟುಂಬಗಳಿಗೆ ಸರ್ಕಾರ ನೀಡುವ ತಲಾ 5 ಲಕ್ಷ ನಿರ್ಣಯದ ಎ ಗ್ರೂಪಿಗೆ ಸೇರಿಸದೆ ಸಿ ಗ್ರೂಪಿಗೆ ಸೇರಿಸಿ 92 ಕುಟುಂಬಗಳ ಮೇಲೆ ಅನ್ಯಾಯ ಮಾಡಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಎದುರು ಎರಡು ಸಲ ಪ್ರತಿಭಟನೆ ಕೈಗೊಂಡಾಗ ತಾಲೂಕ ಕಚೇರಿಯ ಸಿಬ್ಬಂದಿಗಳು ಮಾತ್ರ ಬಂದು ಯಾವುದೇ ನಿರ್ಣಯ ಕೈಗೊಳ್ಳದೆ ನಮ್ಮನ್ನು ಮರಳಿ ಕಳಿಸಿದ್ದಾರೆ. ಈಗ ಅನಿವಾರ್ಯವಾಗಿ ಸೋಮವಾರ ದಿ 19 ರಿಂದ ತಹಶೀಲ್ದಾರ್ ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದೇವೆ. ನಿರ್ಣಯ ಬರುವರೆಗೆ ನಾವು ಯಾವುದೇ ನಿಲುವಿನಲ್ಲಿ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.ನಮ್ಮ ಸಮಸ್ಯೆಗಳ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಇನ್ನಿತರ ಸಚಿವರು ಜಿಲ್ಲಾಧಿಕಾರಿಗಳು ಹಾಗೂ ರಾಜ್ಯದ ವಿಪಕ್ಷ ನಾಯಕ ಸಿದ್ದರಾಮಯ್ಯ ಇವರಿಗೆ ಅಂಚೆಗಳ ಮುಖಾಂತರ ಮನವಿ ಅರ್ಪಿಸಿದ್ದೇವೆ.
ರಾಜ್ಯದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ರಂದು ಅಥಣಿ ತಾಲೂಕಿನಲ್ಲಿ ಒಂದು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು ಶಹಾಪುರ್ ಗ್ರಾಮಕ್ಕೆ ನಾನು ಭೇಟಿ ನೀಡುವುದಾಗಿ ಮಾತು ಕೊಟ್ಟಿದ್ದಾರೆ. ಎಂದು ಮಾದಗೌಡ ಪಾಟೀಲ್ ಹೇಳಿದರು.ಶಹಾಪುರ್ ಗ್ರಾಮದ ಸಂತಸ್ಥರಾದ ಸುಮನ್ ಸ್ವಾಮಿ ಇವರು ಮಾತನಾಡಿ ಸರ್ಕಾರದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ಮೇಲೆ ವಕ್ರದೃಷ್ಟಿ ಇಟ್ಟಿದರಿಂದ, ಇಲ್ಲಿಯ ದಲಿತ ಕುಟುಂಬಗಳು ಅನ್ಯಾಯಕ್ಕೆ ಒಳಗಾಗಿವೆ ಎಂದು ಹೇಳಿ ತಮ್ಮ ಬಗ್ಗೆ ಅಳಲವನ್ನು ತೋಡಿಕೊಂಡರು.
ಈ ವೇಳೆ ಗ್ರಾಮದ ಹಿರಿಯರಾದ ಬಾಬು ಉಮ್ರಾಣಿ, ಬಾಬು ಕಾಂಬಳೆ, ಬಬನ್ ಕಮತಗೆ, ಅಪ್ಪಸಾಹೇ ಪಾಟೀಲ್, ದಾದಾ ಗೌಡ ಪಾಟೀಲ್ ಬಾಬು ಬೋಕಾರ, ಮೋಹನ್ ಜಾದವ್, ಪ್ರಶಾಂತ್ ಕಾಂಬಳೆ, ಸದಾಶಿವ್ ಕಾಂಬಳೆ, ನಿವೃತ್ತಿ ಸನದಿ ಸೇರಿದಂತೆ ಅನೇಕ ದಲಿತ ಮಹಿಳೆಯರು ಪಾಲ್ಗೊಂಡಿದ್ದರು